ಥಾರ್ ಎಕ್ಸ್ ಪ್ರೆಸ್ ರೈಲು ಸೇವೆಗೆ ತಡೆ; 'ಸತ್ಯ ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿ ಬಂದಿದೆ': ಪಾಕ್ ಗೆ ಭಾರತ ಖಡಕ್ ತಿರುಗೇಟು

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದನ್ನು ವಿರೋಧಿಸಿ ಪಾಕಿಸ್ತಾನ ಹೂಡುತ್ತಿರುವ ವಿವಿಧ ತಂತ್ರಗಾರಿಕೆಗಳಿಗೆ ಅದೇ ಧಾಟಿಯಲ್ಲೇ ಭಾರತ ಕೂಡ ತಿರುಗೇಟು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದನ್ನು ವಿರೋಧಿಸಿ ಪಾಕಿಸ್ತಾನ ಹೂಡುತ್ತಿರುವ ವಿವಿಧ ತಂತ್ರಗಾರಿಕೆಗಳಿಗೆ ಅದೇ ಧಾಟಿಯಲ್ಲೇ ಭಾರತ ಕೂಡ ತಿರುಗೇಟು ನೀಡಿದೆ.

370ನೇ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದನ್ನು ವಿರೋಧಿಸಿ ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಇದೀಗ ಥಾರ್ ಎಕ್ಸ್‌ ಪ್ರೆಸ್‌ ರೈಲು ಸೇವೆಯನ್ನೂ ಸ್ಥಗಿತಗೊಳಿಸಿದೆ. ಇದೀಗ ಪಾಕಿಸ್ತಾನದ ಈ ನಡೆಗೆ ಭಾರತ ಖಡಕ್ ತಿರೇಗೇಟು ನೀಡಿದ್ದು, ಪಾಕಿಸ್ತಾನ ಜಗತ್ತಿನ ಮುಂದೆ ಸತ್ಯ ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿರುಗೇಟು ನೀಡಿದೆ. 

ಅಂತೆಯೇ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿರುವ ಭಾರತ, ಪಾಕಿಸ್ತಾನದ ಈ ನಿರ್ಧಾರ ಏಕಪಕ್ಷೀಯ ಎಂದು ಕಿಡಿಕಾರಿದೆ. ಅಂತೆಯೇ ಈ ಕುರಿತಂತೆ ನಮ್ಮ ಜತೆ ಮಾತನಾಡದೆಯೇ ಅವರು  ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಬಗ್ಗೆ  ಅವಲೋಕನ ನಡೆಸುವಂತೆ ನಾವು ಮನವಿ ಮಾಡಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಸಂಜೋತಾ ಎಕ್ಸ್‌ ಪ್ರೆಸ್ ರದ್ದು ಮಾಡುವುದರ ಜೊತೆಗೆ ಪಾಕ್ ನಲ್ಲಿ ಬಾಲಿವುಡ್ ಸಿನಿಮಾ ಪ್ರದರ್ಶನಕ್ಕೂ ಆಗಸ್ಟ್ 8ರಂದು ತಡೆಯೊಡ್ಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com