ರಕ್ಷಾ ಬಂಧನ: ಮಹಿಳೆಯರಿಗೆ ಬಂಪರ್ ಗಿಫ್ಟ್: ಎಲ್ಲ ರೀತಿಯ ಬಸ್ ಗಳಲ್ಲಿ ಪ್ರಯಾಣ ಉಚಿತ 

ಮಹಿಳೆಯರ ಅಚ್ಟುಮಚ್ಟಿನ ರಾಕಿ ಹಬ್ಬ (ರಕ್ಷಾ ಬಂಧನ)ಕ್ಕೆ ಸರ್ಕಾರ ಬಂಪರ್ ಉಡುಗೊರೆ ನೀಡಿದ್ದು, ಎಲ್ಲ ರೀತಿಯ ಬಸ್ ಗಳಲ್ಲಿ ಪ್ರಯಾಣ ಉಚಿತ  ಎಂದು ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಮಹಿಳೆಯರ ಅಚ್ಟುಮಚ್ಟಿನ ರಾಕಿ ಹಬ್ಬ (ರಕ್ಷಾ ಬಂಧನ)ಕ್ಕೆ ಸರ್ಕಾರ ಬಂಪರ್ ಉಡುಗೊರೆ ನೀಡಿದ್ದು, ಎಲ್ಲ ರೀತಿಯ ಬಸ್ ಗಳಲ್ಲಿ ಪ್ರಯಾಣ ಉಚಿತ  ಎಂದು ಘೋಷಣೆ ಮಾಡಿದೆ.

ಹೌದು.. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್, ತಮ್ಮ ರಾಜ್ಯದ ಮಹಿಳೆಯರಿಗೆ ರಕ್ಷ ಬಂಧನ ಹಬ್ಬದ ನಿಮಿತ್ತ ಬಂಪರ್ ಉಡುಗೊರೆ ಘೋಷಣೆ ಮಾಡಿದ್ದು, ರಕ್ಷಾಬಂಧನದ ಅಂಗವಾಗಿ ಅಂದು ಎಲ್ಲ ಮಹಿಳೆಯರಿಗೆ ರಾಜ್ಯ ಸಾರಿಗೆಯ ಎಲ್ಲ ವರ್ಗದ ಬಸ್ಸುಗಳಲ್ಲಿ ಉಚಿತ ಪ್ರಯಾಣ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್,  'ರಕ್ಷಾ ಬಂಧನ ಎನ್ನುವುದು ಮಂಗಳಕರ ಹಬ್ಬ. ಸಹೋದರ-ಸಹೋದರಿಯರ ನಡುವಿನ ಬಾಂಧವ್ಯದ ಪ್ರತೀಕವಾದದ್ದು. ಹೀಗಾಗಿ ರಾಜ್ಯದ ಎಲ್ಲ ನಾಗರಿಕರಿಗೆ ರಕ್ಷಾ ಬಂಧನದ ಶುಭ ಕೋರುತ್ತೇನೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೂಚನೆ ನೀಡಲಾಗಿದ್ದು, ರಕ್ಷಾ ಬಂಧನದ ದಿನ ಎಲ್ಲ ರೀತಿಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಉಚಿತ ಸಾರಿಗೆ ಪ್ರಯಾಣವು ಆಗಸ್ಟ್‌ 14ರ ಮಧ್ಯರಾತ್ರಿಯಿಂದ ಆಗಸ್ಟ್‌ 15ರ ಮಧ್ಯರಾತ್ರಿವರೆಗೆ ಜಾರಿಯಲ್ಲಿರಲಿದೆ. ಉಚಿತ ಪ್ರಯಾಣದ ವೇಳೆ ಬಸ್‌ ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಸೂಕ್ತ ಭದ್ರತೆಯನ್ನೂ ಒದಗಿಸಲಾಗುತ್ತದೆ. ಉತ್ತರ ಪ್ರದೇಶದ ಎಲ್ಲ ಸೋದರಿಯರಿಗೆ ರಾಜ್ಯ ಸರ್ಕಾರದ ಕಡೆಯಿಂದ ಉಡುಗೊರೆಯಿದು ಎಂದು ಆದಿತ್ಯಾನಾಥ್ ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com