ಸಂಜೋತಾ ಎಕ್ಸ್ ಪ್ರೆಸ್ ನಂತರ ಈಗ ದೆಹಲಿ - ಲಾಹೋರ್ ಬಸ್ ಸೇವೆ ರದ್ದುಗೊಳಿಸಿದ ಭಾರತ

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದನ್ನು ಖಂಡಿಸಿ ಪಾಕಿಸ್ತಾನ ಲಾಹೋರ್ - ದೆಹಲಿ ಬಸ್ ಸೇವೆ ಸ್ಥಗಿತಗೊಳಿಸಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದನ್ನು ಖಂಡಿಸಿ ಪಾಕಿಸ್ತಾನ ಲಾಹೋರ್ - ದೆಹಲಿ ಬಸ್ ಸೇವೆ ಸ್ಥಗಿತಗೊಳಿಸಿದ ನಂತರ ಭಾರತ ಸಹ ದೆಹಲಿ - ಲಾಹೋರ್ ಬಸ್ ಸೇವೆಯನ್ನು ಸೋಮವಾರ ರದ್ದುಗೊಳಿಸಿದೆ.

370ನೇ ವಿಧಿ ರದ್ದುಗೊಳಿಸಿದ ಬಳಿಕ ಹತಾಶೆಯಿಂದ ಚಡ​ಪ​ಡಿ​ಸು​ತ್ತಿ​ರುವ ಪಾಕಿ​ಸ್ತಾನ, ದೆಹಲಿ ಹಾಗೂ ಲಾಹೋರ್‌ ನಡುವಿನ ಸೌಹಾರ್ಧ ಬಸ್‌ ಸೇವೆಯನ್ನೂ ರದ್ದುಗೊಳಿಸಿರುವುದಾಗಿ ಶನಿವಾರ ಪಾಕಿಸ್ತಾನದ ಹಿರಿಯ ಸಚಿವರು ತಿಳಿಸಿದ್ದರು.

ಇದೀಗ ಭಾರತ ಸಹ ಬಸ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯಿಂದ ದೆಹಲಿ - ಲಾಹೋರ್ ಬಸ್ ಸೇವೆ ರದ್ದುಗೊಳಿಸಿರುವುದಾಗಿ ದೆಹಲಿ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

1999ರಲ್ಲಿ ದೆಹಲಿ - ಲಾಹೋರ್ ಬಸ್ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ 2001ರಲ್ಲಿ ನಡೆದ ಸಂಸತ್ ದಾಳಿಯ ನಂತರ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ 2003ರಲ್ಲಿ ಪುನಾ ಆರಂಭಿಸಲಾಗಿತ್ತು.

ನಿನ್ನೆಯಷ್ಟೇ ಪಾಕಿಸ್ತಾನದ ಲಾಹೋರ್‌ಗೆ ತೆರಳಬೇಕಿರುವ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com