ಭಾರತೀಯ ಯೋಧರ ಮುಂದೆ 'ದರ್ಪ' ತೋರಿಸಲು ಹೋಗಿ ಮುಖಭಂಗಕ್ಕೀಡಾದ ಪಾಕ್ ಸೈನಿಕರು, ವಿಡಿಯೋ!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370)ರದ್ದುಗೊಳಿಸಿರುವುದರಿಂದ ಪಾಕಿಸ್ತಾನ ಕುಪಿತಗೊಂಡಿದ್ದು ಇನ್ನು ವಾಘಾ ಗಡಿಯಲ್ಲಿ ಭಾರತೀಯ ಯೋಧರ ಮುಂದೆ ದರ್ಪ ತೋರಿಸಲು...

Published: 17th August 2019 04:51 PM  |   Last Updated: 17th August 2019 05:15 PM   |  A+A-


Pak soldiers

ಪಾಕ್ ಸೈನಿಕರು

Posted By : Vishwanath S
Source : Online Desk

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370)ರದ್ದುಗೊಳಿಸಿರುವುದರಿಂದ ಪಾಕಿಸ್ತಾನ ಕುಪಿತಗೊಂಡಿದ್ದು ಇನ್ನು ವಾಘಾ ಗಡಿಯಲ್ಲಿ ಭಾರತೀಯ ಯೋಧರ ಮುಂದೆ ದರ್ಪ ತೋರಿಸಲು ಹೋಗಿ ಪಾಕಿಸ್ತಾನ ಸೈನಿಕರು ಮುಖಭಂಗಕ್ಕೀಡಾಗಿರುವ ವಿಡಿಯೋ ವೈರಲ್ ಆಗಿದೆ.

ಪ್ರತಿ ದಿನ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರ ನಡುವೆ ಪರಸ್ಪರ ಧ್ವಜ ಗೌರವ ಸಲ್ಲಿಸಲಾಗುತ್ತದೆ. ಈ ವೇಳೆ ಉಭಯ ದೇಶದ ಸೈನಿಕರು ಆವೇಶ ಭರಿತ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಈ ವೇಳೆ ಭಾರತೀಯ ಯೋಧರ ಮುಂದೆ ದರ್ಪ ತೋರುವಾಗ ಕಾಲು ಎಡವಿ ಪಾಕ್ ಸೈನಿಕ ತಲೆಗೆ ಹಾಕಿದ್ದ ಟೋಪಿ ಕೆಳಗೆ ಬೀಳುತ್ತದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp