ಮಧ್ಯಪ್ರದೇಶ: ವಿಚ್ಚೇದನಕ್ಕೆ ದಾರಿ ತೋರಿದ ಪತಿಯ ಓದಿನ ಗೀಳು! 

ಮದುವೆಯು ಸ್ವರ್ಗದಲ್ಲಿ ನಿರ್ಧಾರವಾಗುತ್ತದೆ ಎಂದು ಹೇಳುವುದು ವಾಡಿಕೆ. ಆದರೆ ಅದೇ ಮದುವೆಯಾದ ಜೋಡಿ ಯಾವ ಕಲಹಗಳಿಲ್ಲದೆ ಬದುಕುವುದು ಇಂಂದಿನ ಪರಿಸ್ಥಿತಿಯಲ್ಲಿ ದುಸ್ಥರವೆನಿಸಿದೆ. ಅದಕ್ಕೆ ತಾಜಾ ಉದಾಅಹರಣೆಯಾಗಿ ಮಧ್ಯಪ್ರದೇಶದಲ್ಲಿನ ಈ ಪ್ರಕರಣವನ್ನು ನೋಡಬಹುದು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ಮದುವೆಯು ಸ್ವರ್ಗದಲ್ಲಿ ನಿರ್ಧಾರವಾಗುತ್ತದೆ ಎಂದು ಹೇಳುವುದು ವಾಡಿಕೆ. ಆದರೆ ಅದೇ ಮದುವೆಯಾದ ಜೋಡಿ ಯಾವ ಕಲಹಗಳಿಲ್ಲದೆ ಬದುಕುವುದು ಇಂಂದಿನ ಪರಿಸ್ಥಿತಿಯಲ್ಲಿ ದುಸ್ಥರವೆನಿಸಿದೆ. ಅದಕ್ಕೆ ತಾಜಾ ಉದಾಅಹರಣೆಯಾಗಿ ಮಧ್ಯಪ್ರದೇಶದಲ್ಲಿನ ಈ ಪ್ರಕರಣವನ್ನು ನೋಡಬಹುದು.

ಮಧ್ಯಪ್ರದೇಶದಲ್ಲಿ, ಕೋಚಿಂಗ್ ಕ್ಲಾಸ್ ಮಾಲೀಕನಾಗಿರುವ ಯುವಕನ ಓದಿನ ಚಟ, ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲಿನ ಅತಿಯಾದ ಒಲವಿನಿಂದ ಬೇಸತ್ತ ಪತ್ನಿ ತಾನು ವಿಚ್ಚೇದನ ಪಡೆಯಲು ಮುಂದಾಗಿದ್ದಾಳೆ.

ಪತಿಯ ರ್ಧಾತ್ಮಕ ಪರೀಕ್ಷೆಗಳ "ಗೀಳು" ಅತಿಯಾಗಿದ್ದು ಆತ ನನ್ನನ್ನು ನಿರ್ಲಕ್ಷಿಸಿದ್ದಾನೆ ಎಂದು ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ (ಡಿಎಲ್‌ಎಸ್‌ಎ) ಸಲಹೆಗಾರರ ​​ಪ್ರಕಾರ, ಯುಪಿಎಸ್‌ಸಿ ಮತ್ತು ಇತರ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಳಿಗೆ ತನ್ನನ್ನು "ಸೀಮಿತಗೊಳಿಸಿಕೊಂಡ"ಪತಿಯಿಂದ  ತಾನು "ನಿರ್ಲಕ್ಷಿಸಲ್ಪಟ್ಟಿದ್ದೇನೆ" ಎಂದು ಮಹಿಳೆ ಭಾವಿಸಿದ್ದಾಳೆ.

"ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವಾಗ ಪತಿ ಅದಕ್ಕಷ್ಟೇ ಸೀಮಿತಆಗಿಸಿಕೊಳ್ಳುತ್ತಾನೆ." ಮಹಿಳೆ ಕೌನ್ಸಲಿಂಗ್ ವೇಳೆ ಹೇಳಿದ್ದು ಆಕೆಯೊಡನೆ ಸಹವಾಸದ ಕುರಿತಂತೆ ಆತ ಅಸಡ್ಡೆ ತಾಳಿದ್ದಾನೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಂದೆ ಆಕೆ ಅಲವತ್ತುಕೊಂಡಿದ್ದಾಳೆ.

ಆಕೆಯ ಪತಿ ಪಿಎಚ್ ಡಿ ಪದವಿ ಹೊಂದಿರುವುದಾಗಿ ಕೌನ್ಸಲರ್ ಹೇಳಿದ್ದಾರೆ."ಆತ ತನ್ನ ಕುಟುಂಬದಲ್ಲಿ ಒಬ್ಬನೇ ಮಗನಾಗಿದ್ದ. ಆಕೆಯ ಪೋಷಕರಲ್ಲಿ ಒಬ್ಬರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದ ಕಾರಣ ಆತ ಅವಸರದಲ್ಲಿ ಈಕೆಯನ್ನು ವಿವಾಹವಾಗಿದ್ದನು" ಇದೀಗ ಪತ್ನಿ ಆತನಿಂದ ದೂರ ಸರಿದಿದ್ದು ಆತನಿಂದ ತಾನು ವಿಚ್ಚೇದನ ಪಡೆಯಬೇಕೆಂದು ಮನವಿ ಮಾಡಿದ್ದಾಳೆ.

"ಈ ಕುರಿತಂತೆ ಸಂಬಂಧಿಕರು ಮತ್ತು ಇತರರು ಮಧ್ಯಸ್ಥಿಕೆ ವಹಿಸುವ ಪ್ರಯತ್ನ ವಿಫಲವಾಗಿದೆ.ಎಂದು ಹೇಳಿಕೊಳ್ಳುತ್ತಾ, ಈ ವ್ಯಕ್ತಿಯು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅಲ್ಲಿಂದ ಈ ಪ್ರಕರಣವನ್ನು ಕೌನ್ಸೆಲಿಂಗ್‌ ಗೆ ಕಳುಹಿಸಲಾಗಿದೆ." ಎಂದು ಮಿಸ್. ಖಾನ್ ಹೇಳಿದರು. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸುವ ಮೊದಲು ಎರಡೂ ಪಕ್ಷಗಳ ನಡುವೆ ಇನ್ನೂ ನಾಲ್ಕು ಅವಧಿಯ ಸಮಾಲೋಚನೆ ನಡೆಯಲಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com