ಮದುವೆಯಾಗಿ 1 ವರ್ಷವಾಗಿತ್ತು, ಗಂಡನಿಲ್ಲದೆ ನಾನು ಹೇಗೆ ಬದುಕಲಿ: ಎನ್‌ಕೌಂಟರ್ ಆದ ಚೆನ್ನಕೇಶವುಲು ಪತ್ನಿ ಅಳಲು

ಪ್ರಿಯಾಂಕಾ ರೆಡ್ಡಿ(ದಿಶಾ) ಹತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಲಾಗಿದ್ದು ಈ ಪೈಕಿ ಆರೋಪಿ ಮೃತ ಚೆನ್ನಕೇಶವುಲು ಪತ್ನಿ ಗಂಡನಿಲ್ಲದೆ ನಾನು ಹೇಗೆ ಬದುಕಲಿ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

Published: 06th December 2019 11:15 AM  |   Last Updated: 06th December 2019 11:15 AM   |  A+A-


Disha-Keshavulu-Wife

ದಿಶಾ-ಕೇಶವುಲು ಪತ್ನಿ

Posted By : Vishwanath S
Source : Online Desk

ಹೈದರಾಬಾದ್: ಪ್ರಿಯಾಂಕಾ ರೆಡ್ಡಿ(ದಿಶಾ) ಹತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಲಾಗಿದ್ದು ಈ ಪೈಕಿ ಆರೋಪಿ ಮೃತ ಚೆನ್ನಕೇಶವುಲು ಪತ್ನಿ ಗಂಡನಿಲ್ಲದೆ ನಾನು ಹೇಗೆ ಬದುಕಲಿ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. 

ಅತ್ಯಾಚಾರಿಗಳ ಎನ್ಕೌಂಟರ್ ಗೆ ದೇಶಾದ್ಯಂತ ಮೆಚ್ಚುಗೆ ಮಾತುಗಳು ಕೇಳಿಬರುತ್ತಿದ್ದು ಈ ಮಧ್ಯೆ ಪತಿಯನ್ನು ಕಳೆದುಕೊಂಡಿರುವ ಚೆನ್ನಕೇಶವುಲು ಪತ್ನಿ ಮಾತ್ರ ನನಗೆ ಮದುವೆಯಾಗಿ ಒಂದು ವರ್ಷವಷ್ಟೇ ಆಗಿತ್ತು. ಇದೀಗ ನಾನು ಗಂಡನನ್ನು ಕಳೆದುಕೊಂಡಿದ್ದೇನೆ. ಆತನಿಲ್ಲದೆ ಹೇಗೆ ಬದುಕಲಿ ಎಂದು ಕಣ್ಣೀರು ಹಾಕಿದ್ದಾರೆ. 

ವಿಚಾರಣೆ ನಡೆಸುವುದಾಗಿ ಪೊಲೀಸರು ನನ್ನ ಗಂಡನನ್ನು ಕರೆದುಕೊಂಡು ಹೋಗಿದ್ದರು. ಆದರೆ ಇಂದು ನನ್ನ ಗಂಡ ಹೆಣವಾಗಿದ್ದಾನೆ ಎಂದು ಗೋಲಾಡುತ್ತಿದ್ದಾರೆ. 

ಪಶುವೈದ್ಯೆ ಪ್ರಿಯಾಂಕಾ ರೆಡ್ಡಿಯವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ ಆರೋಪಿಗಳು, ನಂತರ ಸೀಮೆಎಣ್ಣೆ ಹಾಕಿ ಸುಟ್ಟುಹಾಕಿದ್ದರು. ಪ್ರಕರಣದ ದೇಶದಾದ್ಯಂತ ಭಾರೀ ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿತ್ತು.

ಅತ್ಯಾಚಾರಿಗಳಾದ ಶಿವು, ಆರಿಫ್ ಚೆನ್ನಕೇಶವುಲು, ನವೀನ್ ಎಂಬುವವರನ್ನು ಪೊಲೀಸರು ಎನ್'ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp