'ಹತ್ಯಾಚಾರ': ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ, ಪ್ರವಾಸಿ ತಾಣವಾದ ಎನ್ ಕೌಂಟರ್ ಸ್ಥಳ!

ಪಶು ವೈದ್ಯೆ ಹತ್ಯಾಚಾರ ಮಾಡಿದ ಕಾಮುಕ ರಾಕ್ಷಸರನ್ನು ಪೊಲೀಸರು ಬೇಟೆಯಾಡಿದ ಸ್ಥಳ ಕೂಡ ಇದೀಗ ದಿಢೀರ್ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಸಾವಿರಾರು ಮಂದಿ ತಂಡೋತಂಡವಾಗಿ ದೌಡಾಯಿಸುತ್ತಿದ್ದಾರೆ.
ಪ್ರವಾಸಿ ತಾಣವಾದ ಎನ್ ಕೌಂಟರ್ ಸ್ಥಳ
ಪ್ರವಾಸಿ ತಾಣವಾದ ಎನ್ ಕೌಂಟರ್ ಸ್ಥಳ

ಹೈದರಾಬಾದ್: ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯಾಚಾರ ಆರೋಪಿಗಳ ಎನ್ಕೌಂಟರ್ ಸುದ್ದಿ ಇದೀಗ ಕಾಡ್ಗಿಚ್ಚಿನಂತೆ ದೇಶಾದ್ಯಂತ ಹಬ್ಬಿದ್ದು, ತೆಲಂಗಾಣ ಪೊಲೀಸರ ಕಾರ್ಯಕ್ಕೆ ಎಲ್ಲಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಂತೆಯೇ ಕಾಮುಕ ರಾಕ್ಷಸರನ್ನು ಪೊಲೀಸರು ಬೇಟೆಯಾಡಿದ ಸ್ಥಳ ಕೂಡ ಇದೀಗ ದಿಢೀರ್ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಸಾವಿರಾರು ಮಂದಿ ತಂಡೋತಂಡವಾಗಿ ದೌಡಾಯಿಸುತ್ತಿದ್ದಾರೆ.

ಹೌದು.. ಇಂದು ಮುಂಜಾನೆ ಹತ್ಯಾಚಾರಿಗಳ ಎನ್ಕೌಂಟರ್ ನಡೆದ ಸ್ಥಳ ಇದೀಗ ದಿಢೀರ್ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಎನ್ಕೌಂಟರ್ ವಿಚಾರ ತಿಳಿದ ಕೂಡ ಹೈದರಾಬಾದ್ ಜನತೆ ಎನ್ಕೌಂಟರ್ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಬಸ್, ಕಾರು, ಬೈಕ್ ಹೀಗೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಘಟನಾ ಸ್ಥಳಕ್ಕೆ ಜನರು ದೌಡಾಯಿಸುತ್ತಿದ್ದು, ಒಂದೆಡೆ ಪ್ರಿಯಾಂಕಾ ರೆಡ್ಡಿಯನ್ನು ಸುಟ್ಟುಹಾಕಿದ ಸ್ಥಳಕ್ಕೆ ಹೂಗಳನ್ನು ಅರ್ಪಿಸಿ ಬಳಿಕ ಎನ್ ಕೌಂಟರ್ ನಡೆದ ಸ್ಥಳಕ್ಕೆ ತೆರಳುತ್ತಿದ್ದಾರೆ.

ಇನ್ನು ಅದೇ ಮಾರ್ಗದಲ್ಲಿ ಚಲಿಸುತ್ತಿರುವ ವಾಹನಗಳಲ್ಲಿನ ಪ್ರಯಾಣಿಕರು ಅಲ್ಲಿಯೇ ಇದ್ದ ಪೊಲೀಸರಿಗೆ ಜೋರಾಗಿ ಕೂಗುತ್ತಾ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಇನ್ನು ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಯುವತಿಯರೂ ಕೂಡ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಥ್ಯಾಂಕ್ಯೂ ತೆಲಂಗಾಣ ಪೊಲೀಸ್ ಎಂದು ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com