ಭಾರತ ತನ್ನದೇ ಆದ ಇಂಧನ ಪರಿವರ್ತನೆ ಹೊಂದಲಿದೆ: ಪೆಟ್ರೋಲಿಂ ಸಚಿವ ಧರ್ಮೇಂದ್ರ ಪ್ರಧಾನ್

ವೈಜ್ಞಾನಿಕ ತಂತ್ರಜ್ಞಾನದ ಅಭಿವೃದ್ಧಿ ಮತ್ತು ನಾವಿನ್ಯತಾ ಮಾದರಿಗಳಿಂದಾಗಿ ಭಾರತ ತನ್ನದೇ ಆದ ಇಂಧನ ಪರಿವರ್ತನೆ ಹೊಂದಲಿದೆ ಎಂದು ಪೆಟ್ರೋಲಿಂ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಹೇಳಿದ್ದಾರೆ.

Published: 18th December 2019 01:27 AM  |   Last Updated: 18th December 2019 01:27 AM   |  A+A-


Dharmendra Pradhan

ಧಮೇಂದ್ರ ಪ್ರಧಾನ್

Posted By : Vishwanath S
Source : UNI

ಮುಂಬೈ: ವೈಜ್ಞಾನಿಕ ತಂತ್ರಜ್ಞಾನದ ಅಭಿವೃದ್ಧಿ ಮತ್ತು ನಾವಿನ್ಯತಾ ಮಾದರಿಗಳಿಂದಾಗಿ ಭಾರತ ತನ್ನದೇ ಆದ ಇಂಧನ ಪರಿವರ್ತನೆ ಹೊಂದಲಿದೆ ಎಂದು ಪೆಟ್ರೋಲಿಂ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಹೇಳಿದ್ದಾರೆ.

ಮುಂಬೈನ ಭಾರತ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅವರು, ತೈಲ ಮತ್ತು ಅನಿಲ ವಲಯದ ದೃಷ್ಟಿಕೋನ ಬದಲಾಗಿದೆ. ಆರಂಭದಲ್ಲಿ ಗರಿಷ್ಠ ಆದಾಯ, ಮೂಲ ಮಂತ್ರವಾಗಿತ್ತು. ಇದೀಗ ಗರಿಷ್ಠ ಉತ್ಪಾದನೆಯ ಗುರಿ ಹೊಂದಲಾಗಿದೆ. ತೈಲ ಮತ್ತು ಅನಿಲ ಉತ್ಪಾದನೆ ಹೆಚ್ಚಿಸಿ, ಆಮದು ತಗ್ಗಿಸಲು ಕಳೆದ ಐದು ವರ್ಷಗಳಲ್ಲಿ ಅನೇಕ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ವಿವರಿಸಿದರು.

ಭಾರತದಲ್ಲಿ 600 ಮೆಟ್ರಿಕ್ ಟನ್ ಜೈವಿಕ ಗೊಬ್ಬರ ಲಭ್ಯವಿದೆ. ಜೊತೆಗೆ ತೈಲ, ಅನಿಲ ಹೊರತುಪಡಿಸಿ ಪರ್ಯಾಯ ಇಂಧನ ಮಾರ್ಗಗಳತ್ತ ಭಾರತ ಮನಸ್ಸು ಮಾಡಿದೆ. ಕಲ್ಲಿದ್ದಲು ಮೀಸಲಿನಿಂದ ಹೆಚ್ಚಿನ ಅನಿಲ ಉತ್ಪಾದಿಸಬಹುದಾಗಿದೆ ಎಂದು ಅವರು, ಶುದ್ಧ ಇಂಧನ ಮತ್ತು ಉತ್ತಮ ಭವಿಷ್ಯಕ್ಕಾಗಿನ ಸಮಾವೇಶದಲ್ಲಿ ಪ್ರತಿಪಾದಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp