ನಿಮ್ಮ ಕೆಲಸ ಬೆಂಕಿ ಹಚ್ಚೋದಲ್ಲ ಆರಿಸೋದು: ಅಮಿತ್ ಶಾಗೆ ಮಮತಾ ಬ್ಯಾನರ್ಜಿ

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್'ಸಿ ವಿರುದ್ಧ ಪಶ್ಚಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರನೇ ದಿನವೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 
ಪಶ್ಚಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್'ಸಿ ವಿರುದ್ಧ ಪಶ್ಚಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರನೇ ದಿನವೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

ನಾವು ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್'ಸಿಗೆ ಅನುಮತಿ ನೀಡುವುದಿಲ್ಲ. ಯಾರಿಗೂ ರಾಜ್ಯದಿಂದ ಹೊರ ಹೋಗುವಂತೆ ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಅಮಿತ್ ಶಾ ವಿರುದ್ಧ ಕಿಡಿಕಾಡಿರುವ ಅವರು, ನಿಮ್ಮ ಕೆಲಸ ದೇಶಕ್ಕೆ ಬೆಂಕಿ ಹಚ್ಚುವುದಲ್ಲ. ಬದಲಾಗಿ ಬೆಂಕಿ ಆರಿಸುವುದು ಎಂದು ಹರಿಹಾಯ್ದಿದ್ದಾರೆ. 

ಬಳಿಕ ಆಧಾರ್ ಪೌರತ್ವದ ಸಾಕ್ಷಿಯಲ್ಲ ಎಂಬ ಅಮಿತ್ ಶಾ ಹೇಳಿಕೆಯನ್ನು ಪ್ರಸ್ತಾಪಿಸಿದ ಮಮತಾ, ಆಧಾರ್ ಪೌರತ್ವದ ಸಾಕ್ಷಿಯಲ್ಲ ಎಂದು ಹೇಳುತ್ತಿದ್ದೀರಿ. ಹಾಗಾದರೆ ಕೇಂದ್ರದ ಕಲ್ಯಾಣ ಯೋಜನೆ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗಳಿಗೇಕೆ ಆಧಾರ್ ಲಿಂಕ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 

ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದೇಶದ ಪ್ರತೀಯೊಬ್ಬರ ಸತ್ಯನಾಶ. ಬಿಜೆಪಿ ನಾಯಕರಿಗೆ ಇಡೀ ದೇಶ ಬಂಧನದ ಕೇಂದ್ರವಾಗಿಬೇಕಿದೆ. ಹಾಗಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com