ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯರ ಸಂಪೂರ್ಣ ಹಕ್ಕು ಅಲ್ಲ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಅಫಿಡವಿಟ್ಟು ಸಲ್ಲಿಕೆ 

ಗರ್ಭಪಾತ ಮಾಡಿಸಿಕೊಳ್ಳುವುದು ಗರ್ಭಿಣಿಯರ ಸಂಪೂರ್ಣ ಹಕ್ಕು ಆಗುವುದಿಲ್ಲ. ತಾಯಿಯ ಆರೋಗ್ಯ ಮತ್ತು ಭ್ರೂಣದ ಸ್ಥಿತಿಗತಿ ಮೇಲೆ ಗರ್ಭಪಾತ ನಿರ್ಧರಿತವಾಗಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗರ್ಭಪಾತ ಮಾಡಿಸಿಕೊಳ್ಳುವುದು ಗರ್ಭಿಣಿಯರ ಸಂಪೂರ್ಣ ಹಕ್ಕು ಆಗುವುದಿಲ್ಲ. ತಾಯಿಯ ಆರೋಗ್ಯ ಮತ್ತು ಭ್ರೂಣದ ಸ್ಥಿತಿಗತಿ ಮೇಲೆ ಗರ್ಭಪಾತ ನಿರ್ಧರಿತವಾಗಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಹೇಳಿದೆ.


ಗರ್ಭಪಾತವನ್ನು ನ್ಯಾಯಸಮ್ಮತಗೊಳಿಸಲು ನಿರ್ದೇಶನ ಕೋರಿ ಮೂವರು ಮಹಿಳೆಯರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ಟು ಸಲ್ಲಿಸಿದೆ.


1971ರ ವೈದ್ಯಕೀಯ ಗರ್ಭಪಾತ ಕಾಯ್ದೆ ಪ್ರಕಾರ, ಗರ್ಭಪಾತ ನಿರ್ದಿಷ್ಟ ಸಂದರ್ಭಗಳಲ್ಲಿ ಮಾಡಿಸಿಕೊಳ್ಳಬಹುದು. ಗರ್ಭಿಣಿಯರ ಜೀವಕ್ಕೆ ಅಪಾಯವಿದ್ದರೆ, ಆಕೆಯ ಶಾರೀರಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವುದಿದ್ದರೆ ದಾಖಲಾತಿ ಮಾಡಿಕೊಂಡಿರುವ ವೈದ್ಯರು ಅಥವಾ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಬಹುದು. ಗರ್ಭಪಾತ ಕಾಯ್ದೆಯ ಸೆಕ್ಷನ್ 3 ಮತ್ತು 5ರಲ್ಲಿ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದ್ದು ಅದನ್ನು ತೆಗೆದುಹಾಕಬೇಕೆಂದು ಮೂವರು ಮಹಿಳೆಯರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿಯನ್ನು ರದ್ದುಪಡಿಸುವಂತೆ ಕೋರಿರುವ ಕೇಂದ್ರ ಸಚಿವಾಲಯ, ಅಸುರಕ್ಷತೆಯ ಗರ್ಭಧಾರಣೆ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದನ್ನು ಕಾನೂನುಬದ್ಧಗೊಳಿಸಲು 1971ರ ಕಾಯ್ದೆ ಜಾರಿಗೆ ತರಲಾಗಿದ್ದು ಇದರಿಂದ ಶಿಶುಗಳ ಮತ್ತು ತಾಯಂದಿರ ಮರಣ ಪ್ರಮಾಣವನ್ನು ತಡೆಯಬಹುದು ಅಲ್ಲದೆ ಅನಾರೋಗ್ಯವನ್ನು ಸಹ ನಿಯಂತ್ರಿಸಬಹುದು ಎಂಬ ಉದ್ದೇಶ ಕಾಯ್ದೆಯಾಗಿದೆ ಎಂದು ಅಫಿಡವಿಟ್ಟಿನಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com