ಸಂಸತ್ ನಲ್ಲಿ ಸಿಎಜಿ ವರದಿ ಮಂಡನೆ, ಯುಪಿಎ ಸರ್ಕಾರಕ್ಕಿಂತ ಕಡಿಮೆ ಬೆಲೆಗೆ ಮೋದಿ ಸರ್ಕಾರದಿಂದ ರಾಫೆಲ್ ಒಪ್ಪಂದ!

ರಫೇಲ್ ಯುದ್ಧ ವಿಮಾನ ಖರೀದಿ​ ವಿವಾದ ತಾರಕಕ್ಕೇರಿರುವಂತೆಯೇ ಇತ್ತ ಸಂಸತ್ ನಲ್ಲಿ ಸಿಎಜಿ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸದಂತೆ ತನ್ನ ವರದಿ ಮಂಡಿಸಿದ್ದು, ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕಿಂತಲೂ ಹಾಲಿ ಎನ್ ಡಿಎ ಸರ್ಕಾರ ಕಡಿಮೆ ಬೆಲೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ​ ವಿವಾದ ತಾರಕಕ್ಕೇರಿರುವಂತೆಯೇ ಇತ್ತ ಸಂಸತ್ ನಲ್ಲಿ ಸಿಎಜಿ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸದಂತೆ ತನ್ನ ವರದಿ ಮಂಡಿಸಿದ್ದು, ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕಿಂತಲೂ ಹಾಲಿ ಎನ್ ಡಿಎ ಸರ್ಕಾರ ಕಡಿಮೆ ಬೆಲೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ಮಹಾಲೇಖಪಾಲರು (ಸಿಎಜಿ) ರಾಫೆಲ್ ಒಪ್ಪಂದದ  ತಮ್ಮ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದು,  'ಹಿಂದಿನ ಯುಪಿಎ ಸರ್ಕಾರ ಮಾಡಿಕೊಂಡ ಒಪ್ಪಂದಕ್ಕಿಂತಲೂ ಕಡಿಮೆ ಬೆಲೆಗೆ ಇಂದಿನ ಎನ್ ಡಿಎ ಸರ್ಕಾರ ಖರೀದಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ವರದಿಯಲ್ಲಿರುವಂತೆ ಯುಪಿಎ ಸರ್ಕಾರ 126 ಯುದ್ಧ ವಿಮಾನಗಳನ್ನು ಖರೀದಿ ಮಾಡಲು ಮಾಡಿಕೊಂಡ ಒಪ್ಪಂದಕ್ಕಿಂತಲೂ ಎನ್ ಡಿಎ ಸರ್ಕಾರ 36 ವಿಮಾನಗಳನ್ನು ಖರೀದಿ ಮಾಡಲು ಮಾಡಿಕೊಂಡ ಒಪ್ಪಂದ ಶೇ. 17.8 ರಷ್ಟು ಕಡಿಮೆಯದ್ದಾಗಿದೆ. ಅಲ್ಲದೆ, ಹಿಂದಿನ ಸರ್ಕಾರ ಮೊದಲ ಹಂತದಲ್ಲಿ 18 ಯುದ್ಧ ವಿಮಾನಗಳನ್ನು ತಯಾರಿಸಿಕೊಡಲು ಮಾಡಿಕೊಂಡ ವೇಳಾಪಟ್ಟಿಗಿಂತಲೂ ಇಂದಿನ ಸರ್ಕಾರ ಮಾಡಿಕೊಂಡ ವೇಳಾಪಟ್ಟಿ ಅತ್ಯಂತ ಉತ್ತಮವಾಗಿದೆ. ಐದು ತಿಂಗಳಲ್ಲಿ 18 ವಿಮಾನಗಳನ್ನು ತಯಾರಿಸಿಕೊಡುವಂತೆ ಎನ್ ಡಿಎ ಸರ್ಕಾರ ತಿಳಿಸಿತ್ತು ಎಂದು ಸಿಎಜಿ  ತನ್ನ ವರದಿಯಲ್ಲಿ ತಿಳಿಸಿದೆ.
ಅಂತೆಯೇ ಒಪ್ಪಂದದ ವೇಳೆ ಭಾರತೀಯ ನೌಕಾ ಪಡೆಯು ತನಗೆ ಬೇಕಾದ ಎಎಸ್ ಕ್ಯುಆರ್ ಎಸ್​ (ನೌಕಾ ಪಡೆಯ ಗಣಾತ್ಮಕ ಅಗತ್ಯಗಳು) ಅಗತ್ಯಗಳನ್ನು ಸೂಕ್ತ ರೀತಿಯಲ್ಲಿ ವಿವರಿಸಿರಲಿಲ್ಲ. ಹೀಗಾಗಿ ತಯಾರಕರು ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಿರಲಿಲ್ಲ. ಅಲ್ಲದೆ, ತನಗೆ ಬೇಕಾದ ಅಗತ್ಯ ಪರಿಕರಗಳನ್ನು ಎಎಸ್ ಕ್ಯುಆರ್ ಎಸ್ ಪದೇ ಪದೆ ಬದಲಾವಣೆ ಮಾಡಿದೆ ಎಂದೂ ಸಿಎಜಿ ತಿಳಿಸಿದೆ.
ಹಿಂದಿನ ಯುಪಿಎ ಸರ್ಕಾರದ 126 ಯುದ್ಧ ವಿಮಾನ ಖರೀದಿ ಒಡಂಬಡಿಕೆಯನ್ನು ರದ್ದು ಮಾಡಿದ್ದು ಏಕೆ ಎಂಬುದರ ಬಗ್ಗೆ ವಿವರಣೆ ನೀಡಿರುವ ಸಿಎಜೆ, ಯುದ್ಧ ವಿಮಾನ ತಯಾರಿರಕಾ ಸಂಸ್ಥೆ ಡಸಾಲ್ಟ್​ ಏವಿಯೇಷನ್​ ಸಂಸ್ಥೆ ಕಡಿಮೆ ಬಿಡ್​ ಸಲ್ಲಿಸಿದ ಸಂಸ್ಥೆಯಾಗಿರಲಿಲ್ಲ. ಯುರೋಪ್​ ಯುದ್ಧ ವಿಮಾನ ಮತ್ತು ಆಂತರಿಕ್ಷ ಸಂಸ್ಥೆಯು ಒಡಂಬಡಿಕೆಯ ಸಂಪೂರ್ಣ ದೂರುಗಳನ್ನು ದಾಖಲಿಸಿರಲಿಲ್ಲ ಎಂದು ಸಿಎಜೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com