ವಿಶ್ವಾಸಮತ ಯಾಚನೆ ಹಿನ್ನಲೆ ಮೈತ್ರಿ ನಾಯಕರಿಂದ ಸ್ಪೀಕರ್ ಭೇಟಿ

ವಿಧಾನಸಭೆ ನಿಯಮಾವಳಿ ಪ್ರಕಾರ ಸದನದ ಕಲಾಪಕ್ಕೆ ಶಾಸಕರು ಗೈರು ಹಾಜರಾಗಬೇಕಾದರೆ ಸಭಾಧ್ಯಕ್ಷರ ಅನುಮತಿ ಪಡೆಯಬೇಕು....
ವಿಶ್ವಾಸಮತ ಯಾಚನೆ ಹಿನ್ನಲೆ ಮೈತ್ರಿ ನಾಯಕರಿಂದ ಸ್ಪೀಕರ್ ಭೇಟಿ
ವಿಶ್ವಾಸಮತ ಯಾಚನೆ ಹಿನ್ನಲೆ ಮೈತ್ರಿ ನಾಯಕರಿಂದ ಸ್ಪೀಕರ್ ಭೇಟಿ
ಬೆಂಗಳೂರು: ವಿಧಾನಸಭೆ ನಿಯಮಾವಳಿ ಪ್ರಕಾರ ಸದನದ ಕಲಾಪಕ್ಕೆ ಶಾಸಕರು ಗೈರು ಹಾಜರಾಗಬೇಕಾದರೆ ಸಭಾಧ್ಯಕ್ಷರ ಅನುಮತಿ ಪಡೆಯಬೇಕು. ಸುಪ್ರೀಂ ಕೋರ್ಟ್ ಆದೇಶ ಪರೋಕ್ಷವಾಗಿ ನಮ್ಮ ಹಕ್ಕಗಳನ್ನು ಕಟ್ಟಿ ಹಾಕುವಂತೆ ಮಾಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಸದನದಿಂದ ಹೊರಗುಳಿಯಲು ಸಭಾಧ್ಯಕ್ಷರ ಅನುಮತಿ ಬೇಕು, ಈ ಬಗ್ಗೆ ಸ್ಪೀಕರ್ ನಮಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ವಿಧಾನಸಭಾ ಸದಸ್ಯರು ಸದನಕ್ಕೆ ಗೈರಾಗಲು ಅನುಮತಿ ಪಡೆಯಬೇಕು ಎಂದು ಅವರು ಖಚಿತಪಡಿಸಿದರು.
ಶಾಸಕರಿಗೆ ವಿಪ್ ನೀಡುವುದು ಆಯಾ ಪಕ್ಷಗಳ ಶಾಸಕಾಂಗದ ಹಕ್ಕಾಗಿದೆ,ಆದರೆ ಅದನ್ನು ಹೇಗೆ ಬಳಸಬೇಕು ಎಂಬುದು ಅವುಗಳ ವಿವೇಚನೆಗೆ ಬಿಟ್ಟದ್ದಾಗಿದೆ.ಶಾಸಕರು ವಿಪ್ ಉಲ್ಲಂಘಿಸಿದರೆ ಆ ಬಗ್ಗೆ ದೂರು ನೀಡಿ ಆ ಬಗ್ಗೆ ಪರಿಶೀಲಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ನಾಳೆ ಸದನದಲ್ಲಿ ವಿಶ್ವಾಸ ಮತದ ಮೇಲೆ ಚರ್ಚೆ ನಡೆಯಲಿದ್ದು, ಸ್ಪೀಕರ್ ಅವರು ಸದನದಲ್ಲಿ ಸೂಚನೆ ನೀಡಿದ ಬಳಿಕ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಆರಂಭವಾಗಲಿದೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.
ಸ್ಪೀಕರ್ ಕಚೇರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಕೆ ಜೆ ಜಾರ್ಜ್, ಎಂ ಬಿ ಪಾಟೀಲ್, ರಿಜ್ವಾನ್ ಅರ್ಷದ್, ಐವಾನ್ ಡಿಸೋಜಾ, ಅಬ್ದುಲ್ ಜಬ್ಬಾರ್ ಭೇಟಿ ನೀಡಿ ಮಾತುಕತೆ ನಡೆಸಿದರು.ಅಲ್ಲದೆ ಕಾಂಗ್ರೆಸ್ ಶಾಸಕರ ಆಪರೇಷನ್ ಕಮಲಕ್ಕೆ ಒಳಗಾಗಿರುವ ಸಾಕ್ಷ್ಯಗಳನ್ನು,ಬಿಜೆಪಿ ಶಾಸಕರ ಜೊತೆ ಕಾಣಿಸಿಕೊಂಡಿರುವ ವಿಡಿಯೋ,ಪೋಟೋ ದಾಖಲೆಗಳನ್ನು ಸ್ಪೀಕರ್ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.ಇದೇ ವೇಳೆ ಸಭಾಧ್ಯಕ್ಷ ರಮೇಶ್ ಕುಮಾರ್ ಕಚೇರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿ ಚರ್ಚೆ ನಡೆಸಿದರು.
ಸಭಾಧ್ಯಕ್ಷರ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಚೆರ್ಚೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಬಿಜೆಪಿಯ ಮಾಧುಸ್ವಾಮಿ ನೇತೃತ್ವದ ನಿಯೋಗ ಸ್ಪೀಕರ್ ಭೇಟಿಗೆ ಆಗಮಿಸಿತು. ಆದರೆ ಕಚೇರಿಯಲ್ಲಿ ಮೈತ್ರಿ ನಾಯಕರು ಇದ್ದ ಕಾರಣ ವಿಧಾನ ಸಭಾ ಕಾರ್ಯದರ್ಶಿ ಕಚೇರಿಯಲ್ಲಿ ಕುಳಿತು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತೆರಳಿದ ಬಳಿಕ ಸ್ಪೀಕರ್ ಕಚೇರಿಗೆ ಜೆ ಸಿ ಮಾಧುಸ್ವಾಮಿ, ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ತೆರೆಳಿ ಭೇಟಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com