ಮಹಾರಾಷ್ಟ್ರ: ಗ್ರಾಮವನ್ನು ಮಾರಾಟಕ್ಕೆ ಇಟ್ಟ ರೈತರು

ಸತತ ಎರಡನೇ ವರ್ಷವೂ ಬರ ಹಾಗೂ ಸಾಲದಿಂದ ಕಂಗೆಟ್ಟಿರುವ ಮರಾಠವಾಡದ ಹಿಂಗೊಲಿ ಜಿಲ್ಲೆಯ ತಾಕ್ತೊಡಾ ಗ್ರಾಮದ ರೈತರು ತಮ್ಮ ಗ್ರಾಮವನ್ನು ಮಾರಾಟಕ್ಕೆ ಇಟ್ಟಿದ್ದಾರೆ.
ಗ್ರಾಮಸ್ಥರು
ಗ್ರಾಮಸ್ಥರು
ಮುಂಬೈ:  ಸತತ ಎರಡನೇ ವರ್ಷವೂ ಬರ ಹಾಗೂ ಸಾಲದಿಂದ ಕಂಗೆಟ್ಟಿರುವ ಮರಾಠವಾಡದ ಹಿಂಗೊಲಿ ಜಿಲ್ಲೆಯ ತಾಕ್ತೊಡಾ ಗ್ರಾಮದ ರೈತರು ತಮ್ಮ ಗ್ರಾಮವನ್ನು ಮಾರಾಟಕ್ಕೆ ಇಟ್ಟಿದ್ದಾರೆ.
'ಮುಖ್ಯಮಂತ್ರಿಗಳೇ ಈ ಗ್ರಾಮ ಮಾರಾಟಕ್ಕೆ ಇದೆ' ಎಂದು ದೊಡ್ಡದಾಗಿ ಬ್ಯಾನರ್ ಬರೆದು ಪಂಚಾಯಿತಿ ಕಚೇರಿ ಹೊರಗಡೆ ಹಾಕಲಾಗಿದೆ. ಸಾಲ ಮನ್ನಾ ಮಾಡದಿದ್ದರೆ ಸಾಮೂಹಿಕ ದಯಾಮರಣ ಹೊಂದುವುದಾಗಿ 300 ರೈತರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದಾರೆ 
ತಾಕ್ತೊಡಾ ವಿದರ್ಭ ಜಿಲ್ಲೆಯ ಇತರ ಹಳ್ಳಿಗಳಂತೆ ನೀರಿನ ತೊಂದರೆ ಎದುರಿಸುತ್ತಿದೆ. ಆದರೆ, ಮಳೆ ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಯಾವುದೇ  ನೆರವು ನೀಡುತ್ತಿಲ್ಲ ಎಂಬ ಆರೋಪ ಇವರದ್ದಾಗಿದೆ.
ಬಾವಿಗಳು ಬತ್ತಿವೆ. ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ.ನೀರಿಲ್ಲದೆ  ಹಾಕಿದ ಬಂಡವಾಳ ವಾಪಾಸ್ ಬರುತ್ತಿಲ್ಲ. ಇಂತಹ ಭೂಮಿ ಇಟ್ಟುಕೊಂಡು ಏನು ಮಾಡೋದು ಎಂದು 39 ವರ್ಷದ ನಾಮ್ ದೇವ್ ಪತಾಂಗೆ ಪ್ರಶ್ನಿಸುತ್ತಾರೆ.
ಕೃಷಿಗಾಗಿ ಜನರು 1 ರಿಂದ 3 ಲಕ್ಷದವರೆಗೂ ಸಾಲ ಮಾಡಿದ್ದಾರೆ ಆದರೆ, ಅದನ್ನು ಈಗ ಪಾವತಿಸಲು ಆಗುತ್ತಿಲ್ಲ, ಒಂದು ಲಕ್ಷಕ್ಕೆ 15 ಸಾವಿರ ರೂ. ಬಡ್ಡಿ ಹಾಕಲಾಗುತ್ತಿದೆ. ಗ್ರಾಮವನ್ನು ಮಾರಾಟ ಮಾಡಲು ಇದೇ ಕಾರಣ ಎಂದು ರೈತರಾದ ಪುಂಡರಿಕ್ ಶಿಂಧೆ ಹಾಗೂ ಪ್ರಮೋದ್ ಚೌಕೆ  ತಮ್ಮ ಅಳಲು ತೋಡಿಕೊಂಡಿದ್ದಾರೆ.
ಎಲ್ಲಾ ಮಟ್ಟದ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಆದರೆ, ಯಾವುದೇ ನೆರವು ಸಿಗುತ್ತಿಲ್ಲ ಎಂದು ತಾಕ್ತೊಡಾ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಪಾಟೀಲ್ ಹೇಳಿದ್ದಾರೆ. ಗ್ರಾಮಸ್ಥರ ಬೇಡಿಕೆಯಿಂದಲೇ ಅವರ ಆಕ್ರೋಶ ಗೊತ್ತಾಗುತ್ತದೆ. ಸರ್ಕಾರ ಅವರೊಂದಿಗೆ ಇದ್ದು, ಎಲ್ಲಾ ರೀತಿಯ ನೆರವು ನೀಡುವುದಾಗಿ  ಕೃಷಿ ಸಚಿವ ಡಾ. ಅನಿಲ್ ಬೊಂಡೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com