ಮುಂಬೈ: ಎಂಟಿಎನ್‌ಎಲ್‌ ಕಟ್ಟಡದಲ್ಲಿ ಅಗ್ನಿ ಅವಘಡ, 100 ಹೆಚ್ಚು ಜನ ಸಿಲುಕಿರುವ ಸಾಧ್ಯತೆ

ಮುಂಬೈ ಬಂದ್ರಾದಲ್ಲಿನ ಮಹಾನಗರ ಟೆಲಿಫೋನ್‌ ನಿಗಮ್‌ ಲಿಮಿಟೆಡ್(ಎಂಟಿಎನ್‌ಎಲ್‌)ನ ಬಹುಮಹಡಿ ಕಟ್ಟಡದಲ್ಲಿ ಸೋಮವಾರ ಭಾರಿ ಆಗ್ನಿ ಅವಘಡ...

Published: 22nd July 2019 12:00 PM  |   Last Updated: 22nd July 2019 06:03 AM   |  A+A-


Fire broke out at Mumbai's telephone exchange building

ಎಂಟಿಎನ್‌ಎಲ್‌ ಕಟ್ಟಡ

Posted By : LSB LSB
Source : ANI
ಮುಂಬೈ: ಮುಂಬೈ ಬಂದ್ರಾದಲ್ಲಿನ ಮಹಾನಗರ ಟೆಲಿಫೋನ್‌ ನಿಗಮ್‌ ಲಿಮಿಟೆಡ್(ಎಂಟಿಎನ್‌ಎಲ್‌)ನ ಬಹುಮಹಡಿ ಕಟ್ಟಡದಲ್ಲಿ ಸೋಮವಾರ ಭಾರಿ ಆಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದಲ್ಲಿ 100ಕ್ಕೂ ಹೆಚ್ಚು ಜನ ಸಿಲುಕಿರುವ ಸಾಧ್ಯತೆ ಇದೆ.

ಇಂದು ಮಧ್ಯಾಹ್ನ 2.30ರ ಸುಮಾರಿಗೆ ಎಂಟಿಎನ್ ಎಲ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ 14 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಪ್ರಾಥಮಿಕ ವರದಿ ಪ್ರಕಾರ, ಅಗ್ನಿ ಅವಘಡದಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ಅನೇಕ ಮಂದಿ ಕಟ್ಟಡದ ಟೆರೇಸ್‌ ಭಾಗಕ್ಕೆ ಬಂದಿದ್ದು, ಅಲ್ಲಿಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಗಡ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಅಗ್ನಿಶಾಮಕ ದಳ ಅಭಿಪ್ರಾಯಪಟ್ಟಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp