ಅಮೆರಿಕಾದಿಂದ ಆದ್ಯತೆಯ ವ್ಯಾಪಾರ ಮಾನ್ಯತೆ ರದ್ದು: ಅದು ನಿರಂತರ ಪ್ರಕ್ರಿಯೆಯ ಭಾಗ ಎಂದ ಭಾರತ

ಆದ್ಯತೆಯ ವ್ಯಾಪಾರ ಮಾನ್ಯತೆಯನ್ನು ರದ್ದುಗೊಳಿಸಿದ ಅಮೆರಿಕಾದ ನಿರ್ಧಾರದ ಹಿನ್ನೆಲೆಯಲ್ಲಿ ಆ ರಾಷ್ಟ್ರದೊಂದಿಗೆ ಸದೃಢ...
ಸಾಂದರ್ಭಿಕ  ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ನವದೆಹಲಿ: ಆದ್ಯತೆಯ ವ್ಯಾಪಾರ ಮಾನ್ಯತೆಯನ್ನು ರದ್ದುಗೊಳಿಸಿದ ಅಮೆರಿಕಾದ ನಿರ್ಧಾರದ  ಹಿನ್ನೆಲೆಯಲ್ಲಿ ಆ ರಾಷ್ಟ್ರದೊಂದಿಗೆ ಸದೃಢ ಆರ್ಥಿಕ ಒಪ್ಪಂದವಿರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಭಾರತ ಹೇಳಿದೆ.

ಆದ್ಯತಾ ವ್ಯಾಪಾರ ನೀತಿಯಡಿ (ಜಿಎಸ್ ಪಿ) ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವುದು ಜೂನ್ 5 ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕಾ ಹೇಳಿದೆ.

ಆರ್ಥಿಕ ಒಪ್ಪಂದಗಳಿಗೆ ಸಂಬಂಧಿಸಿದ ಸಂಬಂಧ ಎಂದಿನಂತೆ ಮುಂದುವರೆಯಲಿದೆ. ಸಂದರ್ಭಕ್ಕನುಗುಣವಾಗಿ ಸಮಸ್ಯೆಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕಾದಿಂದ ಆದ್ಯತೆಯ ವ್ಯಾಪಾರ ಮಾನ್ಯತೆ ರದ್ದು ನಿರಂತರ ಪ್ರಕ್ರಿಯೆಯ ಒಂದು ಭಾಗವಾಗಿದ್ದು, ಅಮೆರಿಕಾದೊಂದಿಗೆ ಸದೃಢ ಆರ್ಥಿಕ ಒಪ್ಪಂದವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪರಸ್ಪರ ಅನುಕೂಲಕ್ಕೆ ತಕ್ಕಂತೆ ಈ ಒಪ್ಪಂದ ಮಾಡಿಕೊಳ್ಳುವ ಮೂಲಕ ಮುಂದಿನ  ಪ್ರಗತಿಗಾಗಿ ಎರಡು ರಾಷ್ಟ್ರಗಳು ಜೊತೆಯಾಗಿ ಕಾರ್ಯನಿರ್ವಹಿಸುವ ವಿಶ್ವಾಸ ಹೊಂದಿರುವುದಾಗಿ ವಾಣಿಜ್ಯ ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com