ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು: ಕೇಂದ್ರ ಸಚಿವ ನಿತಿನ್ ಗಡ್ಕರಿ

ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಗೆ ಮೊದಲ ಅದ್ಯತೆ ನೀಡುವುದೇ ತಮ್ಮ ಸರ್ಕಾರದ ಉದ್ದೇಶ ಎಂದು ಕೇಂದ್ರ ಭೂ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಖಾತೆ ಮತ್ತು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಖಾತೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಗೆ ಮೊದಲ ಅದ್ಯತೆ ನೀಡುವುದೇ ತಮ್ಮ ಸರ್ಕಾರದ ಉದ್ದೇಶ ಎಂದು ಕೇಂದ್ರ ಭೂ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಖಾತೆ ಮತ್ತು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಖಾತೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಭೂ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಖಾತೆ ಹಾಗೂ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಇಲಾಖೆಗಳು ಹಲವು ಪ್ರಮುಖ ವಿಷಯಗಳನ್ನು ಒಳಗೊಂಡಿವೆ. ದೇಶದ ಬೆಳವಣಿಗೆ ಪ್ರಮಾಣ ಮತ್ತು ಉದ್ಯೋಗದ ಸಾಮರ್ಥ್ಯವನ್ನು ನಿರ್ಧರಿಸುತ್ತವೆ. ಈ ವಲಯದಿಂದ ಉದ್ಯೋಗಾವಕಾಶ ಹೆಚ್ಚಾಗಬೇಕು ಎಂಬುದು ಪ್ರಧಾನಮಂತ್ರಿಯವರ ನಿರೀಕ್ಷೆಯಾಗಿದೆ. ಸದ್ಯ ನಮ್ಮಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ತುಂಬ ಅಗತ್ಯ. ತಮ್ಮ ಸರ್ಕಾರದ ಆದ್ಯತೆ ಕೂಡ ಉದ್ಯೋಗ ಸೃಷ್ಟಿಗೇ ಎಂದು ನಿತಿನ್​ ಗಡ್ಕರಿ ತಿಳಿಸಿದರು.
'ಉದ್ಯೋಗ ಅವಕಾಶ ಹೆಚ್ಚಿಸುವುದು ನಮ್ಮ ಮುಖ್ಯ ಉದ್ದೇಶ. ಇನ್ನು ಒಂದರಿಂದ ಒಂದೂವರೆ ವರ್ಷಗಳಲ್ಲಿ ಪ್ರತಿದಿನ 40 ಕಿ.ಮೀ ರಸ್ತೆ ನಿರ್ಮಾಣ ಮಾಡುವ ನೂತನ ಗುರಿಯನ್ನು ಹಾಕಿಕೊಂಡಿದ್ದೇವೆ. ಅಂತೆಯೇ ಈ ಬಾರಿ 125 ಕೋಟಿ ಸಸಿ ನೆಟ್ಟು ಬೆಳೆಸುವ ಯೋಜನೆ ಇದೆ. ದೇಶದ ಜನಸಂಖ್ಯೆಯಷ್ಟೇ ಮರಗಿಡಗಳೂ ಇರಬೇಕು. ಇನ್ನು ಐದು ವರ್ಷಗಳಲ್ಲಿ ರಸ್ತೆ ನಿರ್ಮಾಣದ ಜತೆಯಲ್ಲೇ ಗಿಡ ನೆಡುವ ಕೆಲಸವೂ ನಡೆಯಲಿದೆ. ಹಾಗೇ ಜನರಿಗೆ ಅನುಕೂಲವಾಗುವಂತಹ ರಸ್ತೆ ಬದಿ ಸೌಲಭ್ಯಗಳನ್ನು ಒದಗಿಸುವ ದೊಡ್ಡ ಮಟ್ಟದ ಯೋಜನೆ ಇದೆ. 
ಅಗತ್ಯ ಸೌಕರ್ಯಗಳನ್ನು ಸುಮಾರು 2000 ಕಡೆಗಳಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಮುಂಬೈ-ದೆಹಲಿ ಎಕ್ಸ್​​ಪ್ರೆಸ್​ ವೇ ಯಲ್ಲಿ ಕೆಲಸ ಪ್ರಾರಂಭವಾಗಿದೆ. ಉಳಿದ 12 ಹೆದ್ದಾರಿಗಳಲ್ಲಿ ಕೂಡ ಈ ಯೋಜನೆ ಇನ್ನು ಮೂರು ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com