ಆಂಧ್ರಪ್ರದೇಶ, ತೆಲಂಗಾಣಕ್ಕೆ ನೂತನ ರಾಜ್ಯಪಾಲರ ನೇಮಕ: ರೇಸ್ ನಲ್ಲಿ ಕಿರಣ್ ಬೇಡಿ, ಸುಮಿತ್ರಾ ಮಹಾಜನ್

ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಂಪುಟ ರಚನೆ ಕಾರ್ಯವೂ ಆಗಿದ್ದು, ಆಡಳಿತ ಯಂತ್ರ ಪ್ರಾರಂಭಗೊಂಡಿದೆ....
ಕಿರಣೇ ಬೇಡಿ, ಸುಮಿತ್ರಾ ಮಹಾಜನ್ ಮತ್ತು ಉಮಾ ಭಾರತಿ
ಕಿರಣೇ ಬೇಡಿ, ಸುಮಿತ್ರಾ ಮಹಾಜನ್ ಮತ್ತು ಉಮಾ ಭಾರತಿ
ವಿಜಯವಾಡ: ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಂಪುಟ ರಚನೆ ಕಾರ್ಯವೂ ಆಗಿದ್ದು, ಆಡಳಿತ ಯಂತ್ರ ಪ್ರಾರಂಭಗೊಂಡಿದೆ. ಕೇಂದ್ರದಲ್ಲಿ ಹೊಸದಾಗಿ ಸರ್ಕಾರ ರಚನೆ ಆದಾಗ ರಾಜ್ಯಗಳ ರಾಜ್ಯಪಾಲರುಗಳನ್ನು ಬದಲಾಯಿಸುವ ಪದ್ಧತಿ ಸಾಮಾನ್ಯವಾಗಿ ನಡೆಯುತ್ತಾ ಬಂದಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ, ಆಂಧ್ರ ಪ್ರದೇಶಕ್ಕೆ ಸುಷ್ಮಾ ಸ್ವರಾಜ್, ತೆಲಂಗಾಣಕ್ಕೆ ಪುದುಚೆರಿ ರಾಜ್ಯಪಾಲೆ ಕಿರಣ್ ಬೇಡಿ ಅವರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಸಭೆ ಕರೆದಿದ್ದು ರಾಜ್ಯಪಾಲರ ನೇಮಕ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ, ಹೀಗಾಗಿ 2 ರಾಜ್ಯಗಳಿಗೆ ಶೀಘ್ರವೇ ರಾಜ್ಯಪಾಲರ ನೇಮಕವಾಗಲಿದೆ,  2009 ರಲ್ಲಿ ಅವಿಭಜಿತ ಆಂಧ್ರ ಪ್ರದೇಶಕ್ಕೆ ನರಸಿಂಹನ್ ಅವರನ್ನು ರಾಜ್ಯಪಾರಲನ್ನಾಗಿ ಕೇಂದ್ರ ಸರ್ಕಾರ ನೇಮಿಸಿತ್ತು 2014 ರಲ್ಲಿ ಆಂಧ್ರ ಪ್ರದೇಶ ತೆಲಂಗಾಣ ವಿಭಜನೆಯಾದ ನಂತರ ಎಂರಡು ರಾಜ್ಯಗಳಿಗೂ ಒಬ್ಬರೇ ರಾಜ್ಯಪಾಲರಾಗಿ ನರಸಿಂಹನ್ ಮುಂದುವರಿದಿದ್ದರು. 
ಇನ್ನೂ ಬಿಜೆಪಿ ಹಿರಿಯ ನಾಯಕಿಯರುಗಳಾದ, ಉಮಾ ಭಾರತಿ, ಸುಮಿತ್ರಾ ಮಹಾಜನ್ ಹಾಗೂ ಬಂಡಾರು ದತ್ತಾತ್ರೇಯ. ಅವರ ಹೆಸರುಗಳು ಕೇಳಿ ಬರುತ್ತಿವೆ,.ಆಂಧ್ರ ಪ್ರದೇಶದಲ್ಲಿ  ಇನ್ನೂ ರಾಜಭವನ ನಿರ್ಮಾಣವಾಗದ ಕಾರಣ, ರಾಜ್ಯಪಾಲರಿಗಾಗಿ ಜಗನ್ ಸರ್ಕಾರ ತಾತ್ಕಾಲಿಕ ವ್ಯವಸ್ಥೆ ಮಾಡಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com