2013ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಗೆ ನರೇಂದ್ರ ಮೋದಿ ಹೆಸರು ಸೂಚಿಸಿದ್ದೇ ಪರಿಕ್ಕರ್!

2014ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷ ಗೊಂದಲದಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಅಂದಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರ ಹೆಸರು ಸೂಚಿಸಿದ್ದೇ ಮನೋಹರ್ ಪರಿಕ್ಕರ್ ಅವರು..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 2014ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷ ಗೊಂದಲದಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಅಂದಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರ ಹೆಸರು ಸೂಚಿಸಿದ್ದೇ ಮನೋಹರ್ ಪರಿಕ್ಕರ್ ಅವರು..
ಹೌದು... ಅಂದು ಬಿಜೆಪಿ ಪಕ್ಷವು ಗೋವಾದಲ್ಲಿ 2013ರಲ್ಲಿ ಮಹತ್ವದ ಸಭೆ ಸೇರಿದ್ದ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಧಾನಿ ಅಭ್ಯರ್ಥಿಯ ಗೊಂದಲ ವೇರ್ಪಟ್ಟಿತ್ತು. ಆಗ ಅಂದಿನ ಸಭೆಯಲ್ಲಿ ನಾನಾ ಹೆಸರುಗಳ ಪ್ರಸ್ತಾಪವಾಗಿತ್ತಾದರೂ, ನರೇಂದ್ರ ಮೋದಿ ಹೆಸರನ್ನು ಅಧಿಕೃತವಾಗಿ ಮೊದಲ ಬಾರಿಗೆ ಮುನ್ನಲೆಗೆ ಇಟ್ಟಿದ್ದು ಇದೇ ಪರಿಕ್ಕರ್ ಅವರು.
ಮೋದಿ ನಂತರದ ಪ್ರಧಾನಿ ಸಂಭವನೀಯರ ಹೆಸರುಗಳಲ್ಲಿ ಪರ್ರಿಕರ್ ಹೆಸರು ಬಲವಾಗಿ ಕೇಳಿಬಂದಿತ್ತು. ಡಿಸೆಂಬರ್‌ 13, 1955ರಲ್ಲಿ ಗೋವಾದ ಮಾಪುಸಾದಲ್ಲಿ ಜನಿಸಿದ ಮನೋಹರ್‌ ಪರಿಕ್ಕರರಿಗೆ ಬಾಲ್ಯದಿಂದಲೇ ಆರ್‌ಎಸ್ಎಸ್‌ ಜೊತೆ ಅವಿನಾಭಾವ ನಂಟು. 2000ನೇ ಇಸುವಿಯಲ್ಲಿ ಮೊದಲ ಬಾರಿಗೆ ಗೋವಾ ಮುಖ್ಯಮಂತ್ರಿ ಆದ ಪರ್ರಿಕರ್, ಮೂರು ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
2014 ರಿಂದ 2017ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪರ್ರಿಕರರನ್ನು ಗೋವಾದಿಂದ ಕರೆಯಿಸಿಕೊಂಡು ರೈಸಿನಾ ಹಿಲ್ಸ್ ಸೌತ್ ಬ್ಲಾಕ್ ಕಚೇರಿಗೆ ನೇಮಕ ಮಾಡಿಕೊಂಡ ನರೇಂದ್ರ ಮೋದಿ ಸರಕಾರ, ನವೆಂಬರ್ 26, 2014 ರಿಂದ ಸೆಪ್ಟೆಂಬರ್ 2, 2017ರವರೆಗೆ ಉತ್ತರಪ್ರದೇಶದಿಂದ ರಾಜ್ಯಸಭಾ ಸಂಸದರನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com