ಗೋಡ್ಸೆ ಹಿಂದೂ ಉಗ್ರ ಹೇಳಿಕೆ; ನಟ ಕಮಲ್ ಹಾಸನ್ ಮೇಲೆ ಚಪ್ಪಲಿ ತೂರಾಟ

ನಾಥುರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊಟ್ಟ ಮೊದಲ ಹಿಂದೂ ಉಗ್ರ ಎಂಬ ಹೇಳಿಕೆ ನೀಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ನಟ ಕಮಲ್ ಹಾಸನ್ ಮೇಲೆ ಚಪ್ಪಲಿ ತೂರಾಟ ಮಾಡಿದ್ದಾರೆ.

Published: 16th May 2019 12:00 PM  |   Last Updated: 16th May 2019 02:07 AM   |  A+A-


Slippers Thrown At Kamal Haasan Amid Controversy Over Godse Hindu terrorist Remark

ಸಂಗ್ರಹ ಚಿತ್ರ

Posted By : SVN SVN
Source : Online Desk
ಚೆನ್ನೈ: ನಾಥುರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊಟ್ಟ ಮೊದಲ ಹಿಂದೂ ಉಗ್ರ ಎಂಬ ಹೇಳಿಕೆ ನೀಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ನಟ ಕಮಲ್ ಹಾಸನ್ ಮೇಲೆ ಚಪ್ಪಲಿ ತೂರಾಟ ಮಾಡಿದ್ದಾರೆ.

ತಮಿಳುನಾಡಿನ ತಿರುಪ್ಪರಂಕುಂಡ್ರಮ್ ವಿಧಾನಸಭೆ ಕ್ಷೇತ್ರದಲ್ಲಿ ನಿನ್ನೆ ನಟ ಕಮಲ್ ಹಾಸನ್ ಪ್ರಚಾರ ನಡೆಸುತ್ತಿದ್ದ ವೇಳೆ ಚಪ್ಪಲಿ ತೂರಲಾಗಿದ್ದು, ಅದೃಷ್ಟವಶಾತ್ ಕಮಲ್ ಹಾಸನ್ ಇದ್ದ ವೇದಿಕೆಯವರೆಗೂ ಚಪ್ಪಲಿ ತೂರಿ ಬರದೇ ಅಲ್ಲೇ ಜನರ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ.

ಪ್ರಚಾರ ರ್ಯಾಲಿ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಹಾಗೂ ಕೆಲ ಹಿಂದೂಪರಸಂಘಟನೆಗಳ ಕಾರ್ಯಕರ್ತರೂ ಸೇರಿಕೊಂಡಿದ್ದರು. ಇದೇ ವೇಳೆ ನಟ ಕಮಲ್ ಹಾಸನ್ ರತ್ತ ಚಪ್ಪಲಿ ತೂರಲಾಗಿದೆ. ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖಂಡರು ಪೊಲೀಸರಿದೆ ದೂರು ನೀಡಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು ಬಿಜೆಪಿ ಮತ್ತು ಹನುಮಾನ್ ಸೇನೆಯ 11 ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಅಲ್ಪ ಸಂಖ್ಯಾತರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ್ದ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, ಭಾರತದ ಮೊದಲ ಭಯೋತ್ಪಾದಕ ಹಿಂದೂ ಆತನ ಹೆಸರು ನಾಥೂರಾಮ್ ಗೋಡ್ಸೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಕಮಲ್ ಹಾಸನ್ ಅವರ ಹೇಳಿಕೆ ವಿರುದ್ಧ ದೇಶದಾದ್ಯಂತ ಪರ ವಿರೋಧ ಚರ್ಚೆಗಳು ಭುಗಿಲೆದ್ದಿವೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp