ಗೂಢಚರ್ಯೆ: ಮೇ ತಿಂಗಳಲ್ಲೇ ಎಚ್ಚರಿಕೆ ಕುರಿತ ವಾಟ್ಸಪ್ ಹೇಳಿಕೆ ತಳ್ಳಿ ಹಾಕಿದ ಕೇಂದ್ರ ಸರ್ಕಾರ ಹೇಳಿದ್ದೇನು?

ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ಗೂಢಚರ್ಯೆ ಕುರಿತು ಕೇಂದ್ರ ಸರ್ಕಾರಕ್ಕೆ ಮೇ ತಿಂಗಳಲ್ಲೇ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದೆ. ಆದರೆ ಈ ಹೇಳಿಕೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು, ಅಂತಹ ಯಾವುದೇ ಮಾಹಿತಿಯನ್ನು ವಾಟ್ಸಪ್ ತನ್ನೊಂದಿಗೆ ಹಂಚಿಕೊಂಡಿಲ್ಲ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ಗೂಢಚರ್ಯೆ ಕುರಿತು ಕೇಂದ್ರ ಸರ್ಕಾರಕ್ಕೆ ಮೇ ತಿಂಗಳಲ್ಲೇ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದೆ. ಆದರೆ ಈ ಹೇಳಿಕೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು, ಅಂತಹ ಯಾವುದೇ ಮಾಹಿತಿಯನ್ನು ವಾಟ್ಸಪ್ ತನ್ನೊಂದಿಗೆ ಹಂಚಿಕೊಂಡಿಲ್ಲ ಎಂದು ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರದ ಮೂಲಗಳು, CERT-IN ಕುರಿತಂತೆ ವಾಟ್ಸಪ್ ನ ಅಧಿಕಾರಿಗಳು ಚರ್ಚೆ ನಡೆಸಿದ್ದರು. ಆದರೆ ಪೆಗಾಸಿಸ್ ಸ್ಪೈವೇರ್ ಕುರಿತು ಅವರು ಯಾವುದೇ ರೀತಿಯ ಚರ್ಚೆಯನ್ನಾಗಲಿ ಅಥವಾ ಮಾಹಿತಿಯನ್ನಾಗಲಿ ನೀಡಿರಲಿಲ್ಲ. ಕೇವಲ ತಾಂತ್ರಿಕ ದೌರ್ಬಲ್ಯದ ಕುರಿತು ಚರ್ಚೆ ನಡೆಸಿತ್ತು. ಆದರೆ ಬಳಕೆದಾರರ ಮಾಹಿತಿ ಕದಿಯುವ ಕುರಿತು ಮಾಹಿತಿ ನೀಡಿರಲಿಲ್ಲ ಎಂದು ಹೇಳಿದೆ.

ಈ ಬಗ್ಗೆ ಅನಧಿಕೃತ ಹೇಳಿಕೆ ನೀಡಿರುವ ಸರ್ಕಾರದ ಅಧಿಕಾರಿಗಳು ಕೂಡ ಐದು ತಿಂಗಳ ಹಿಂದೆ ವಾಟ್ಲಪ್ ಅಧಿಕಾರಿಗಳು ಭೇಟಿಯಾಗಿದ್ದರು. ಅಂದೇ ಅವರು ಪೆಗಾಸಿಸ್ ಸ್ಪೈವೇರ್ ಕುರಿತು ಚರ್ಚೆ ಮಾಡಬಹುದಿತ್ತು. ಆದರೆ ಅಂದೇಕೆ ಅವರು ಈ ಬಗ್ಗೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. 

ಇನ್ನು ಭಾರತದಲ್ಲಿ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇತ್ತ ಇತರೆ ದೇಶಗಳೂ ಕೂಡ ಈ ಕುರಿತು ಗಮನ ಕೇಂದ್ರೀಕರಿಸಿದ್ದು, ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ದೇಶಗಳು ಟ್ರೇಸೆಬಿಲಿಟಿ (ಪತ್ತೆಹಚ್ಚುವಿಕೆ) ಪರವಾಗಿ ಬ್ಯಾಟ್ ಬೀಸಲು ಆರಂಭಿಸಿವೆ. ಅಲ್ಲದೆ ಇತರೆ ದೇಶಗಳೂ ಕೂಡ ಬಳಕೆದಾರರ ಖಾಸಗಿತನ ರಕ್ಷಣೆಗೆ ಒತ್ತು ನೀಡಲು ಮುಂದಾಗುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com