ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಮೈತ್ರಿಯಿಂದ ಮಹಾರಾಷ್ಟ್ರಕ್ಕೆ ಲಾಭ!

ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಯಿಂದ ಮಹಾರಾಷ್ಟ್ರಕ್ಕೆ ಲಾಭವಿದೆ ಎಂದು ಖ್ಯಾತ ಲೇಖಕ ಹಾಗೂ ಮುಂಬೈ ವಿವಿಯ ಪ್ರಾಧ್ಯಾಪಕ ದೀಪಕ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಯಿಂದ ಮಹಾರಾಷ್ಟ್ರಕ್ಕೆ ಲಾಭವಿದೆ ಎಂದು ಖ್ಯಾತ ಲೇಖಕ ಹಾಗೂ ಮುಂಬೈ ವಿವಿಯ ಪ್ರಾಧ್ಯಾಪಕ ದೀಪಕ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ವೇಳೆ ಶಿವಸೇನೆ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆ ಕೈ ಜೋಡಿಸಿದ್ದೇ ಆದರೆ ಮಹಾರಾಷ್ಟ್ರದ ಒಂದು ನೂತನ ಶಕೆ ಆರಂಭವಾಗುತ್ತದೆ. ಮಹಾರಾಷ್ಟ್ರ ವಿನೂತನ ಮಾರ್ಗದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಿವಸೇನೆ ತನ್ನ ಪ್ರಬಲ ಹಿಂದುತ್ವವಾದವನ್ನು ಸಡಿಲಗೊಳಿಸಿದ್ದು, ಕಾಂಗ್ರೆಸ್ ಕೂಡ ಸೆಕ್ಯುಲರ್ ಚಿಂತನೆಗಳ ರಾಜಕೀಯದತ್ತ ಚಿಂತನೆ ನಡೆಸಬೇಕು. ಅಲ್ಲದೆ ಎನ್ ಸಿಪಿ ತನ್ನ ರಾಜಕೀಯದ ಕುರಿತು ಮರು ಚಿಂತನೆ ನಡೆಸಬೇಕು. ಆಗ ಮಾತ್ರ ಹೊಸ ರಾಜಕೀಯ ಚಿಂತನೆಗೆ ಮಾರ್ಗವಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ಮೈತ್ರಿಯಿಂದಾಗಿ ರಾಜ್ಯಕ್ಕೆ ಸಾಕಷ್ಟು ಲಾಭವಿದ್ದು, ಅಭಿವೃದ್ಧಿ ಕಾರ್ಯ ನಡೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com