'ಮಹಾ' ಬಿಕ್ಕಟ್ಟು: ಎನ್​ಸಿಪಿ, ಕಾಂಗ್ರೆಸ್​ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧ: ಸಂಜಯ್ ರಾವತ್

ಮಹಾರಾಷ್ಟ್ರದ ಅತಂತ್ರ ರಾಜಕೀಯ ಸ್ಥಿತಿಗೆ ಮಾತಿಗೆ ತಪ್ಪಿದ ಬಿಜೆಪಿಯೇ ಕಾರಣ ಎಂದು ಆರೋಪಿಸಿರುವ ಶಿವಸೇನೆ ಎನ್​ಸಿಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ಸೋಮವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಮಹಾರಾಷ್ಟ್ರದ ಅತಂತ್ರ ರಾಜಕೀಯ ಸ್ಥಿತಿಗೆ ಮಾತಿಗೆ ತಪ್ಪಿದ ಬಿಜೆಪಿಯೇ ಕಾರಣ ಎಂದು ಆರೋಪಿಸಿರುವ ಶಿವಸೇನೆ ಎನ್​ಸಿಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ಸೋಮವಾರ ಹೇಳಿದ್ದಾರೆ.

ಈ ಕುರಿತಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ರಾವತ್​,  ವಿಪಕ್ಷ ಸ್ಥಾನದಲ್ಲಿ ಕೂರುವುದಾಗಿ ಹೇಳುತ್ತ ಬಿಜೆಪಿ ಜನಾದೇಶವನ್ನು ಲೇವಡಿ ಮಾಡಿದೆ. ನಿಶ್ಚಯಿಸಿಕೊಂಡಿದ್ದ 50-50 ಫಾರ್ಮುಲಾಕ್ಕೆ ಒಪ್ಪಿಕೊಂಡಿದ್ದರೆ, ಸ್ಥಿರ ಸರ್ಕಾರವನ್ನು ಬಿಜೆಪಿ-ಶಿವಸೇನೆ ಮೈತ್ರಿಕೂಟ ಕೊಡಬಹುದಾಗಿತ್ತು. ಅವರು ಅದಕ್ಕೆ ಬದ್ಧರಾಗಿಲ್ಲದ ಕಾರಣ ಈಗ ಅದು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಕೇಂದ್ರ ಸಚಿನ ಅರವಿಂದ್ ಸಾವಂತ್ ರಾಜಿನಾಮೆ ಕುರಿತು ಮಾತನಾಡಿದ ಅವರು, 'ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ನಿರ್ದೇಶನ ಪ್ರಕಾರವೇ ಅರವಿಂದ್ ಸಾವಂತ್ ರಾಜೀನಾಮೆ ಕೊಟ್ಟು ಕೇಂದ್ರ ಸಚಿವ ಸಂಪುಟದಿಂದ ಹೊರಬಂದಿದ್ದಾರೆ ಎಂದರು.  ಮುಖ್ಯಮಂತ್ರಿ ಪದವಿಯನ್ನು ಶಿವಸೇನೆಗೆ ಬಿಟ್ಟುಕೊಡುವ ಉದ್ದೇಶ ಯಾವತ್ತಿಗೂ ಬಿಜೆಪಿಗೆ ಇರಲಿಲ್ಲ. ಹೀಗಾಗಿಯೇ ಅದು ಸರ್ಕಾರ ರಚನೆಗೆ ಸುದೀರ್ಘ ಸಮಯ ಕೇಳಿತ್ತು. ಇದಕ್ಕೆ ರಾಜ್ಯಪಾಲರು ಕೊಟ್ಟಿದ್ದಾರೆ. ಈಗ ನಮಗೆ ಕೇವಲ 24 ಗಂಟೆ ಕಾಲಾವಕಾಶವನ್ನು ಕೊಟ್ಟು ಸರ್ಕಾರ ರಚನೆ ಮಾಡಿ ಎಂದು ಹೇಳಿದ್ದಾರೆ. ಹೀಗಾಗಿ ನಾವೀಗ ಎನ್​ಸಿಪಿ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವ ಆಯ್ಕೆಯನ್ನು ಮುಕ್ತವಾಗಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com