ರಾಜ್ಯಸಭಾ ಮಾರ್ಷಲ್'ಗಳ ಹೊಸ ಸಮವಸ್ತ್ರಕ್ಕೆ ಟೀಕೆ: ವಸ್ತ್ರಸಂಹಿತೆ ಪರಿಶೀಲನೆಗೆ ಸಭಾಪತಿ ಆದೇಶ

250ನೇ ಐತಿಹಾಸಿಕ ಕಲಾಪ ನಡೆಸಿದ ರಾಜ್ಯಸಭೆಯಲ್ಲಿ ಮಾರ್ಷಲ್'ಗಳು ಧರಿಸಿದ್ದ ಹೊಸ ಸಮವಸ್ತ್ರಕ್ಕೆ ಭಾರೀ ಟೀಕೆಗಳು ಹಾಗೂ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಹೊಸ ವಸ್ತ್ರಸಂಹಿತೆಯನ್ನು ಪರಿಶೀಲಿಸಲು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಆದೇಶಿಸಿದ್ದಾರೆ. 
ರಾಜ್ಯಸಭಾ ಮಾರ್ಷಲ್'ಗಳ ಹೊಸ ಸಮವಸ್ತ್ರಕ್ಕೆ ಟೀಕೆ: ವಸ್ತ್ರಸಂಹಿತೆ ಪರಿಶೀಲನೆಗೆ ಸಭಾಪತಿ ಆದೇಶ
ರಾಜ್ಯಸಭಾ ಮಾರ್ಷಲ್'ಗಳ ಹೊಸ ಸಮವಸ್ತ್ರಕ್ಕೆ ಟೀಕೆ: ವಸ್ತ್ರಸಂಹಿತೆ ಪರಿಶೀಲನೆಗೆ ಸಭಾಪತಿ ಆದೇಶ

ನವದೆಹಲಿ: 250ನೇ ಐತಿಹಾಸಿಕ ಕಲಾಪ ನಡೆಸಿದ ರಾಜ್ಯಸಭೆಯಲ್ಲಿ ಮಾರ್ಷಲ್'ಗಳು ಧರಿಸಿದ್ದ ಹೊಸ ಸಮವಸ್ತ್ರಕ್ಕೆ ಭಾರೀ ಟೀಕೆಗಳು ಹಾಗೂ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಹೊಸ ವಸ್ತ್ರಸಂಹಿತೆಯನ್ನು ಪರಿಶೀಲಿಸಲು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಆದೇಶಿಸಿದ್ದಾರೆ. 

ವಿವಿಧ ಸಲಹೆಗಳನ್ನು ಪರಿಗಣಿಸಿದ ನಂತರ ರಾಜ್ಯಸಭಾ ಸಚಿವಾಲಯ ಮಾರ್ಷಲ್‌ಗಳಿಗೆ ಹೊಸ ವಸ್ತ್ರಸಂಹಿತೆಯನ್ನು ರೂಪಿಸಿದೆ. ಆದರೆ ಕೆಲ ರಾಜಕೀಯ ಪಕ್ಷಗಳು ಹಾಗೂ ಗಣ್ಯ ವ್ಯಕ್ತಿಗಳಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ಈ ಬಗ್ಗೆ ಪರಿಶೀಲಿಸಲು ಸಚಿವಾಲಯದ ಕಾರ್ಯದರ್ಶಿಯವರಿಗೆ ಸೂಚಿಸಲು ನಿರ್ಧರಿಸಿದ್ದೇನೆ ಎಂದು ನಾಯ್ಡು ಹೇಳಿದ್ದಾರೆ.
 
250ನೇ ಐತಿಹಾಸಿಕ ಕಲಾಪ ನಡೆಸಿದ ರಾಜ್ಯಸಭೆಯಲ್ಲಿ ಸೋಮವಾರ ಮಾರ್ಷಲ್'ಗಳು ಧರಿಸಿದ್ದ ನೂತನ ಸಮವಸ್ತ್ರ ಎಲ್ಲರ ಗಮನವನ್ನು ಸೆಳೆದಿತ್ತು. ಈ ಹಿಂದೆ ಭಾರತೀಯ ಶೈಲಿಯ ಪೇಟ ಇರುವ ಪೋಷಾಕಿಗೆ ಬದಲಾಗಿ ಮಿಲಿಟರಿ ಶೈಲಿಯ ಹೊಸ ಸಮವಸ್ತ್ರ ಧರಿಸಿ ಮಾರ್ಷಲ್'ಗಳು ಕಾರ್ಯನಿರ್ವಹಿಸಿದ್ದಾರೆ. ನೂತನ ಸಮವಸ್ತ್ರ ಸೇನಾ ಸಮವಸ್ತ್ರ ಹೋಲುತ್ತಿದ್ದು, ಅದೇ ಶೈಲಿಯ ಸೂಟ್ ಹಾಗೂ ಪ್ಯಾಂಟ್ ಇದೆ.     
                               
ಮಾರ್ಷಲ್ ಗಳ ಈ ಹೊಸ ಸಮವಸ್ತ್ರಕ್ಕೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದ್ದು, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.   

ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ವೇದ್ ಮಲಿಕ್ ಅವರು ಹೊಸ ಸಮವಸ್ತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಅಕ್ರಮ ಹಾಗೂ ಭದ್ರತೆಗೆ ಅಪಾಯ ಎಂದು ಬಣ್ಣಿಸಿದ್ದಾರೆ. 

ಹೊಸ ಸಮವಸ್ತ್ರಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಅಸಮ್ಮತಿ ವ್ಯಕ್ತಪಡಿಸಿರುವ ಮಲಿಕ್ ಅವರು, ಉಪರಾಷ್ಟ್ರಪತಿ  ವೆಂಕಯ್ಯ ನಾಯ್ಡು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ರಕ್ಷಣಾ ಸಚಿವರು ಶೀಘ್ರಗತಿಯಲ್ಲಿ ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com