ದೇಶರಾಜ್ಯಸಭಾ ಮಾರ್ಷಲ್'ಗಳ ಹೊಸ ಸಮವಸ್ತ್ರಕ್ಕೆ ಟೀಕೆ: ವಸ್ತ್ರಸಂಹಿತೆ ಪರಿಶೀಲನೆಗೆ ಸಭಾಪತಿ ಆದೇಶ
250ನೇ ಐತಿಹಾಸಿಕ ಕಲಾಪ ನಡೆಸಿದ ರಾಜ್ಯಸಭೆಯಲ್ಲಿ ಮಾರ್ಷಲ್'ಗಳು ಧರಿಸಿದ್ದ ಹೊಸ ಸಮವಸ್ತ್ರಕ್ಕೆ ಭಾರೀ ಟೀಕೆಗಳು ಹಾಗೂ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಹೊಸ ವಸ್ತ್ರಸಂಹಿತೆಯನ್ನು ಪರಿಶೀಲಿಸಲು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಆದೇಶಿಸಿದ್ದಾರೆ.