ತೆಲಂಗಾಣದಲ್ಲಿ ರಾಜ್ಯ ಸಾರಿಗೆ ನಿಗಮ ನೌಕರರ ವಜಾ: ಒಕ್ಕೂಟ, ಬಿಜೆಪಿಯಿಂದ ವ್ಯಾಪಕ ಖಂಡನೆ 

ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ನಿರತರಾಗಿದ್ದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸುವ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ನಿರ್ಧಾರವನ್ನು ಸೋಮವಾರ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ(ಟಿಎಸ್ಆರ್ ಟಿಸಿ) ನೌಕರರ ಒಕ್ಕೂಟ ಮತ್ತು ಬಿಜೆಪಿ ಖಂಡಿಸಿವೆ. 
ಒಕ್ಕೂಟ ನೌಕರರ ಪ್ರತಿಭಟನೆ
ಒಕ್ಕೂಟ ನೌಕರರ ಪ್ರತಿಭಟನೆ

ಹೈದರಾಬಾದ್(ತೆಲಂಗಾಣ): ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ನಿರತರಾಗಿದ್ದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸುವ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ನಿರ್ಧಾರವನ್ನು ಸೋಮವಾರ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ(ಟಿಎಸ್ಆರ್ ಟಿಸಿ) ನೌಕರರ ಒಕ್ಕೂಟ ಮತ್ತು ಬಿಜೆಪಿ ಖಂಡಿಸಿವೆ.


ಟಿಎಸ್ಆರ್ ಟಿಸಿ ನೌಕರರ ಒಕ್ಕೂಟದ ಹೈದರಾಬಾದ್-ಗ್ರೇಟರ್ ಹೈದರಾಬಾದ್ ವಲಯ ಕಾರ್ಯದರ್ಶಿ ರಾಘವಲು ಮುಖ್ಯಮಂತ್ರಿಯ ತೀರ್ಮಾನವನ್ನು ಖಂಡಿಸಿದ್ದಾರೆ. ಸುಮಾರು 50 ಸಾವಿರ ನೌಕರರನ್ನು ಸೇವೆಯಿಂದ ತೆಗೆದುಹಾಕುವ ಮುಖ್ಯಮಂತ್ರಿಯವರ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ, ಇದು ಅನ್ಯಾಯವಾಗಿದ್ದು ಕಾನೂನಿಗೆ ವಿರುದ್ಧವಾದ ಕ್ರಮ ಎಂದು ಹೇಳಿದರು.


ಮೊನ್ನೆ ಸೆಪ್ಟೆಂಬರ್ 3ರಂದು ಆರ್ ಟಿಸಿ ವ್ಯವಸ್ಥಾಪಕರಿಗೆ ನಾವು 26 ಅಂಶಗಳ ಮನವಿಯನ್ನು ಸಲ್ಲಿಸಿದ್ದೇವೆ. ಆದರೆ ಈ ಬಗ್ಗೆ ನಮ್ಮಲ್ಲಿ ಇದುವರೆಗೆ ಯಾರೂ ಸರ್ಕಾರದ ಕಡೆಯವರು ಚರ್ಚೆ ನಡೆಸಿಲ್ಲ ಎಂದರು.


ಸರ್ಕಾರಿ ನೌಕರರನ್ನು ವಜಾಗೊಳಿಸಿ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಖಾಸಗೀಕರಣಗೊಳಿಸಲು ಮುಖ್ಯಮಂತ್ರಿಗಳು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಹೊಸ ನೌಕರರನ್ನು ನೇಮಕ ಮಾಡುತ್ತದೆ. ನಾವು ಹಳೆ ನೌಕರರು ಜೀವನೋಪಾಯಕ್ಕೆ ಏನು ಮಾಡಬೇಕು, ನಮ್ಮ ಮಕ್ಕಳ ಭವಿಷ್ಯವೇನು ಎಂದು ಆರ್ ಟಿಸಿ ನೌಕರರ ವಲಯ ಪ್ರಚಾರ ಕಾರ್ಯದರ್ಶಿ ಮೊಹಮ್ಮದ್ ಆಜೀಜ್ ಹೇಳಿದ್ದಾರೆ.


ರಾಜ್ಯ ಬಿಜೆಪಿ ಕೂಡ ಸರ್ಕಾರದ ನಡೆಯನ್ನು ಖಂಡಿಸಿದ್ದು ಸರ್ಕಾರದ ನಿರ್ಧಾರವನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com