ಮಾಡ್ರನ್ ಆಗಿಲ್ಲ ಅಂತ ಹೆಂಡ್ತಿಗೆ ತಲಾಖ್ ಕೊಟ್ಟ ಭೂಪ!

ಹೆಂಡ್ತಿ ಮಾಡ್ರನ್ ಅಗಿಲ್ಲ ಎಂದು ಹೇಳಿ ತಲಾಖ್ ಕೊಟ್ಟಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ನಡೆದಿದೆ.

Published: 13th October 2019 08:14 AM  |   Last Updated: 13th October 2019 08:14 AM   |  A+A-


Woman given 'triple talaq' for not being 'modern'

ಸಂತ್ರಸ್ಥೆ ನೂರಿ ಫಾತಿಮಾ

Posted By : Srinivasamurthy VN
Source : ANI

ಪಾಟ್ನಾ: ಹೆಂಡ್ತಿ ಮಾಡ್ರನ್ ಅಗಿಲ್ಲ ಎಂದು ಹೇಳಿ ತಲಾಖ್ ಕೊಟ್ಟಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನೂರಿ ಫಾತಿಮಾ ಎಂಬ ಮಹಿಳೆಗೆ ಆಕೆಯ ಪತಿ ಇಮ್ರಾನ್ ಮುಸ್ತಾಫಾ ಅವರು ತ್ರಿವಳಿ ತಲಾಖ್ ನೀಡಿದ್ದು, ತಲಾಖ್ ಗೆ ನೀಡಿರುವ ಕಾರಣ ವಿಲಕ್ಷಣವಾಗಿದೆ. ಹೌದು.. ತನ್ನ ಪತ್ನಿ ಮಾಡ್ರನ್ ಆಗಿಲ್ಲ. ಪಾರ್ಟಿ ಕಲ್ಚರ್ ಗೊತ್ತಿಲ್ಲ. ಮದ್ಯ, ಸಿಗರೇಟ್ ಸೇದುವುದಿಲ್ಲ ಮತ್ತು ಮಾಡ್ರನ್ ಡ್ರೆಸ್ ಹಾಕಲ್ಲ ಎಂಬ ಕಾರಣಕ್ಕೆ ಆಕೆಗೆ ತಲಾಖ್ ನೀಡಿದ್ದಾನೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ತನ್ನ ಅಳಲು ತೋಡಿಕೊಂಡಿರುವ ಮಹಿಳೆ ನೂರಿ ಫಾತಿಮಾ, 2015ರಲ್ಲಿ ಇಮ್ರಾನ್ ಮುಸ್ತಾಫಾರನ್ನು ಮದುವೆಯಾಗಿದ್ದೆ. ಬಳಿಕ ದೆಹಲಿಗೆ ಸ್ಥಳಾಂತರವಾಗಿದ್ದೆವು. ಕೆಲ ತಿಂಗಳ ಬಳಿಕ ಆತ ನನಗೆ ಮಾಡ್ರನ್ ಆಗಿರುವಂತೆ ಸೂಚಿಸುತ್ತಿದ್ದ. ತುಂಡುಡುಗೆ ತಂದು ಹಾಕಿಕೊಳ್ಳುವಂತೆ ಬಲವಂತ ಮಾಡುತ್ತಿದ್ದ. ರಾತ್ರಿ ಪಾರ್ಟಿಗೆ ಕರೆದುಕೊಂಡು ಹೋಗಿ ಮದ್ಯ ಸೇವನೆ ಮಾಡುವಂತೆ ಹೇಳುತ್ತಿದ್ದ. ಇದಕ್ಕೆ ನಾನು ನಿರಾಕರಿಸಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ಆದರೂ ನಾನು ಸಹಿಸಿಕೊಂಡು ಬಂದಿದ್ದೆ. ಆದರೆ ಕೆಲ ದಿನಗಳ ಹಿಂದೆ ತ್ರಿವಳಿ ತಲಾಖ್ ಗೆ ಬಲವಂತ ಮಾಡಿದಾಗ ನಾನು ಅದಕ್ಕೆ ನಿರಾರಿಸಿದ್ದೆ. ಆಗ ನನ್ನನ್ನು ಮನೆಯಿಂದ ಹೊರ ಹಾಕಿದ್ದ ಎಂದು ಹೇಳಿದ್ದಾರೆ.

ಇದೀಗ ಮಹಿಳೆ ಈ ಕುರಿತಂತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗ ಆಕೆಯ ಪತಿಗೆ ನೋಟಿಸ್ ಜಾರಿ ಮಾಡಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp