ಹರ್ಯಾಣ: ಸಿಎಂ ಸ್ಥಾನ ಕೊಟ್ಟವರಿಗೆ ನಮ್ಮ ಬೆಂಬಲ- ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ

ಹರ್ಯಾಣ ವಿಧಾನಸಭಾ ಚುನಾವಣಾ ಫಲಿಂತಾಶ ಅತಂತ್ರದತ್ತ ಸಾಗಿರುವಂತೆಯೇ ಇತ್ತ ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ ಸಿಎಂ ಸ್ಥಾನ ನೀಡಿದವರಿಗೇ ನಮ್ಮ ಬೆಂಬಲ ಎಂದು ಘೋಷಣೆ ಮಾಡಿದ್ದಾರೆ.
ದುಷ್ಯಂತ್ ಚೌಟಾಲಾ
ದುಷ್ಯಂತ್ ಚೌಟಾಲಾ

ಅತಂತ್ರವಾದ ಹರ್ಯಾಣ ವಿಧಾನಸಭೆ, ಸರ್ಕಾರ ರಚನೆಗೆ ಜೆಜೆಪಿ ಬೆಂಬಲ ಅತ್ಯಗತ್ಯ

ಚಂಡೀಘಡ: ಹರ್ಯಾಣ ವಿಧಾನಸಭಾ ಚುನಾವಣಾ ಫಲಿಂತಾಶ ಅತಂತ್ರದತ್ತ ಸಾಗಿರುವಂತೆಯೇ ಇತ್ತ ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ ಸಿಎಂ ಸ್ಥಾನ ನೀಡಿದವರಿಗೇ ನಮ್ಮ ಬೆಂಬಲ ಎಂದು ಘೋಷಣೆ ಮಾಡಿದ್ದಾರೆ.

90 ಸ್ಥಾನದ ಹರ್ಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 46 ಸ್ಥಾನಗಳ ಅಗತ್ಯತೆ ಇದ್ದು, ಬಿಜೆಪಿ ಮೈತ್ರಿಕೂಟ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮೈತ್ರಿಕೂಟ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ ಹರ್ಯಾಣದಲ್ಲಿ ಇತರೆ ಪಕ್ಷಗಳು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಸಾಧ್ಯತೆ ಇದ್ದು, ಒಟ್ಟು 20 ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ.

ಈ ಪೈಕಿ ದುಷ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಾರ್ಟಿ, 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇ ಕಾರಣಕ್ಕೆ ಹರ್ಯಾಣದಲ್ಲಿ ಜೆಜೆಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.

ಇನ್ನು ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರು ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟಾಲ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಹರ್ಯಾಣದ ಜನತೆ ತಿರಸ್ಕರಿಸಿದ್ದಾರೆ. ಹೀಗಾಗಿ ನಾವು ನಮಗೆ ಯಾರು ಸಿಎಂ ಸ್ಥಾನ ನೀಡುತ್ತಾರೆಯೋ ಅವರಿಗೇ ನಮ್ಮ ಬೆಂಬಲ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿರುವ ಅವರು, ಹರಿಯಾಣದ ಶೇ 75ರಷ್ಟು ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇದು ಬದಲಾವಣೆಯ ಮುನ್ಸೂಚನೆ. ನೀವಿನ್ನು ಯಮುನೆಯ ಆಚೆ ದಡದಲ್ಲಿ ಇರಬೇಕು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಗಾದಿಯತ್ತ ಚೌಟಾಲಾ
ಇನ್ನು ಜೆಜೆಪಿ ನಾಯಕ ದುಶ್ಯಂತ್‌ ಚೌಟಾಲಾ ಹರಿಯಾಣದ ಮುಖ್ಯಮಂತ್ರಿ ಗಾದಿಯನ್ನು ಕೋರಬಹುದು ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಬಿಜೆಪಿ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್‌ ಸಿಂಗ್ ಬಾದಲ್ ಅವರು ಚೌಟಾಲಾ ಪರವಾಗಿ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com