ಸ್ಕೂಟಿ ಚಾಲಕನಿಗೆ 23 ಸಾವಿರ ರೂ ದಂಡ ಬೆನ್ನಲ್ಲೇ, ಆಟೋ ಚಾಲಕನಿಗೆ 32, 500 ರೂ ದಂಡ!

ಸ್ಕೂಟಿಯ ಬೆಲೆಗಿಂತ ದುಬಾರಿ ದಂಡ ತೆತ್ತ ದ್ವಿಚಕ್ರ ವಾಹನ ಮಾಲೀಕನ ಸುದ್ದಿ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಆಟೋ ಚಾಲಕನಿಗೆ ಪೊಲೀಸರು ಬರೊಬ್ಬರಿ 32, 500 ರೂ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗುರುಗ್ರಾಮ ಪೊಲೀಸರಿಂದ ಆಟೋ ಚಾಲಕನಿಗೆ ದುಬಾರಿ ದಂಡ, ಬೇಸ್ತು ಬಿದ್ದ ಚಾಲಕ

ನವದೆಹಲಿ: ಸ್ಕೂಟಿಯ ಬೆಲೆಗಿಂತ ದುಬಾರಿ ದಂಡ ತೆತ್ತ ದ್ವಿಚಕ್ರ ವಾಹನ ಮಾಲೀಕನ ಸುದ್ದಿ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಆಟೋ ಚಾಲಕನಿಗೆ ಪೊಲೀಸರು ಬರೊಬ್ಬರಿ 32, 500 ರೂ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿ ಸೆಪ್ಟೆಂಬರ್‌ 1ರಿಂದ ಜಾರಿಯಾದ ಬಳಿಕ ದಾಖಲೆಗಳಿಲ್ಲದೆಯೇ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ನಿನ್ನೆ ದೆಹಲಿಯ ವ್ಯಕ್ತಿಯೊಬ್ಬರಿಗೆ ಪೊಲೀಸರು ಬರೊಬ್ಬರಿ 23 ಸಾವಿರ ರೂ ದಂಡ ವಿಧಿಸಲಾಗಿದೆ. ಸ್ಕೂಟಿ ಚಾಲಕ ಹೆಲ್ಮೆಟ್‌ ಇಲ್ಲದೆಯೇ ವಾಹನ ಚಲಾಯಿಸಿದ್ದು ಹಾಗೂ ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ದಿನೇಶ್‌ ಮದನ್‌ ಎಂಬುವವರಿಗೆ ಗುರುಗ್ರಾಮ ಸಂಚಾರ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸಿದ್ದರು. ಅಚ್ಚರಿ ಎಂದರೆ ಆತನ ದಂಡಕ್ಕಿಂತ ಸ್ಕೂಟಿಯ ಬೆಲೆಯೇ ಕಡಿಮೆಯಾಗಿತ್ತು.

ಈ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಮತ್ತದೇ ಗುರುಗ್ರಾಮದಲ್ಲಿ ಪೊಲೀಸರು ಆಟೋ ಚಾಲಕನಿಗೆ 32, 500 ರೂ ದಂಡ ವಿಧಿಸಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಆಟೋ ಚಾಲಕ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇದೇ ಕಾರಣಕ್ಕೆ ಆತನ ಎಲ್ಲ ಪ್ರಕರಣಗಳಿಗೆ ಒಟ್ಟು 32,500 ಸಾವಿರ ರೂ ದಂಡ ವಿಧಿಸಲಾಗಿದೆ. ಪೂರ್ವ ದೆಹಲಿಯ ಗೀತಾ ಕಾಲೋನಿ ನಿವಾಸಿ ಮೊಹಮದ್ ಮುಸ್ತಾಕಿನ್ ಎಂಬ ಚಾಲಕನಿಗೆ ಪೊಲೀಸರು 32,500 ಸಾವಿರ ರೂ ದಂಡ ವಿಧಿಸಿದ್ದಾರೆ. 

ಪೊಲೀಸರು ಮೊಹಮದ್ ಮುಸ್ತಾಕಿನ್ ರನ್ನು ನಿಲ್ಲಿಸಿದಾಗ ಅವರ ಬಳಿ ವಾಹನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ದಾಖಲೆಗಳಿರಲಿಲ್ಲ. ಅಲ್ಲದೆ ಆತ ಹಲವು ಬಾರಿ ಸಿಗ್ನಲ್ ಜಂಪ್ ಮಾಡಿದ್ದು, ಅದೂ ಕೂಡ ದುಬಾರಿ ದಂಡಕ್ಕೆ ಕಾರಣ. ಹೀಗಾಗಿ 32, 500 ಸಾವಿರ ರೂ ದಂಡವಿಧಿಸಲಾಗಿದೆ. ಅವರು ಕೋರ್ಟ್ ಗೆ ತಮ್ಮ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದರೆ ದಂಡದ ಪ್ರಮಾಣ ತಗ್ಗುವ ಸಾದ್ಯತೆ ಇದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com