'ಚಂದ್ರಯಾನ-2 ಮಿಷನ್' ಟ್ರೋಲ್ ಮಾಡುತ್ತಿರುವ ಪಾಕ್ ಚಳಿ ಬಿಡಿಸಿದ ಭಾರತೀಯರು

ಚಂದ್ರಯಾನ-2 ಮಿಷನ್'ವನ್ನು ಟ್ರೋಲ್ ಮಾಡುತ್ತಿರುವ ಪಾಕಿಸ್ತಾನಿಗರನ್ನು ಭಾರತೀಯ ನೆಟ್ಟಿಗರು ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚಂದ್ರಯಾನ-2 ಮಿಷನ್'ವನ್ನು ಟ್ರೋಲ್ ಮಾಡುತ್ತಿರುವ ಪಾಕಿಸ್ತಾನಿಗರನ್ನು ಭಾರತೀಯ ನೆಟ್ಟಿಗರು ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದ್ದಾರೆ. 

ಚಂದ್ರನ ಅಂಗಳದ ಮೇಲೆ ಲ್ಯಾಂಡರ್'ನ್ನು ಇಳಿಸುವ ಕೊನೆಯ 15 ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. 

ಸಿಗ್ನಲ್ ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ, ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿಮೀವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆಂದು ಘೋಷಣೆ ಮಾಡಿದರು. 

ಇಸ್ರೋ ಅಧ್ಯಕ್ಷರ ಈ ಘೋಷಣೆ ಬಳಿಕ ಚಂದ್ರಯಾನ-2 ಮಿಷನ್ ಕುರಿತಂತೆ ಪಾಕಿಸ್ತಾನಿಗರು ಟ್ರೋಲ್ ಮಾಡಲು ಆರಂಭಿಸಿದ್ದರು. ಪಾಕಿಸ್ತಾನಿಗರ ಈ ದುರ್ವರ್ತನೆಗೆ ಭಾರತೀಯರು ತಿರುಗೇಟು ನೀಡುತ್ತಿದ್ದಾರೆ. 

ಚಂದ್ರಯಾನ-2 ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲಗೊಂಡಿದೆ. ಚಂದ್ರಯಾನ ಮಿಷನ್'ಗೆ ಬಳಕೆ ಮಾಡಿರುವ ಹಣ ಆ ರಾಷ್ಟ್ರದ ಆರ್ಥಿಕತೆಗಿಂತಲೂ ಹೆಚ್ಚಾಗಿದೆ. ಭಾರತ ಇನ್ನೂ 100 ಚಂದ್ರಯಾನಗಳನ್ನು ನಡೆಸಬಹುದು. ಅಷ್ಟಾದರೂ ಭಾರತ ತನ್ನ ಅಸ್ಥಿತ್ವತೆಯಿಂದಲೇ ಇರುತ್ತದೆ. ನಿಮ್ಮ ಹಾಗಲ್ಲ ಎಂದು ಟ್ವಿಟರ್ ಬಳಕೆದಾರರೊಬ್ಬರು ತಿರುಗೇಟು ನೀಡಿದ್ದಾರೆ. 

ಭಾರತ ಇನ್ನೂ ಸೋತಿಲ್ಲ. ಚಂದ್ರಯಾನ-2 ಲ್ಯಾಂಡರ್ ನಿಂದ ಸಂಪರ್ಕವನ್ನಷ್ಟೇ ಕಳೆದುಕೊಂಡಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. 

ನಾಸಾ ಕೂಡ ಒಂದೊಮ್ಮೆ ವೈಫಲ್ಯವನ್ನು ಕಂಡಿತ್ತು. ವೈಫಲ್ಯಗಳೇ ಮುಂದಿನ ಯಶಸ್ಸಿಗೆ ದಾರಿಯಾಗಲಿದೆ. ಮುಂದಿನ ಯಶಸ್ಸಿನ ಸಿದ್ಧತೆಗಾಗಿ ಭಾರತ ಸೋತಿದೆ. ಈಗಲೇ ತೀರ್ಪು ನೀಡಬಾರದು. ಇಸ್ರೋ ಕೇವಲ ಒಂದೇ ಒಂದು ಸೋಲನ್ನು ಕಂಡಿದೆ. 

ಪಾಕ್ ಪ್ರಜೆಗಳೇ, ಇದು ನಮ್ಮ ವಿಫಲತೆಯಲ್ಲ. ನಮ್ಮ ಯಶಸ್ಸಿನ ಮೊದಲ ಹೆಜ್ಜೆ. ಯಾರೂ ಪ್ರವೇಶಿಸಿದ ಅಂಗಳದಲ್ಲಿ ಈಗಾಗಲೇ ನಾವು ಪ್ರವೇಶ ಮಾಡಿದ್ದೇವೆ. ವಿಜಯವನ್ನು ನಾವು ಕಳೆದುಕೊಂಡಿಲ್ಲ. ವಿಜಯ ಇನ್ನು ಕೆಲವೇ ದೂರದಲ್ಲಿದೆ. ಬೇರೆಯವರನ್ನು ಟೀಕೆ ಮಾಡುವುದಕ್ಕೂ ಮುನ್ನ ನಿಮ್ಮ ಪರಿಸ್ಥಿತಿಯನ್ನೊಮ್ಮೆ ಆಲೋಚಿಸಿ. 

ಇದು ಕೇವಲ ಆರಂಭವಷ್ಟೇ. ಭಾರತ ಸೋತಿಲ್ಲ. ಈಗಾಗಲೇ ನಾವು ಗ್ರಹದ ಬಳಿ ಹೋಗಿದ್ದೇವೆ. ಚಂದ್ರನಲ್ಲಿರುವ ಅನ್ವೇಷಿಸದ ಸ್ಥಳವನ್ನು ಈಗಾಗಲೇ ನಾವು ತಲುಪಿದ್ದೇವೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ನಾವು ಅದ್ಭುತವಾಗಿ ಪ್ರಗತಿ ಸಾಧಿಸುತ್ತಿದ್ದೇವೆ.

ಆತ್ಮಹತ್ಯಾ ಬಾಂಬಲ್ ಆಗುವುದನ್ನು ಪ್ರೋತ್ಸಾಹಿಸುವ ಬದಲು, ಜನರಿಗೆ ನಾವು ವಿಜ್ಞಾನವನ್ನು ಹೇಳಿಕೊಡುತ್ತಿದ್ದೇವೆಂದು ಮತ್ತೊಬ್ಬರು ಬಳಕೆದಾರರು ತಿರುಗೇಟು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com