ಬಾಬ್ರಿ ಮಸೀದಿ ಧ್ವಂಸ: ಮುಸ್ಲಿಮರ ಪರ ವಕಾಲತ್ತು ವಹಿಸಿದ್ದಕ್ಕೆ ಜೀವ ಬೆದರಿಕೆ ಎಂದ ವಕೀಲ ರಾಜೀವ್ ಧವನ್

ಅಯೋಧ್ಯೆ ವಿವಾದ ಸಂಬಂಧ ಮುಸ್ಲಿಂ ಪರ ವಕಾಲತ್ತು ವಹಿಸಿದ್ದಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸುನ್ನಿ ವಕ್ಫ್ ಬೋರ್ಡ್ ಹಾಗೂ ಇನ್ನಿತರ ಮುಸ್ಲಿಂ ಅರ್ಜಿದಾರರ ಪರ ವಕೀಲ ರಾಜೀವ್ ಧವನ್ ಅವರು ಗುರುವಾರ ಸುಪ್ರೀಂಕೋರ್ಟ್ ಬಳಿ ಹೇಳಿಕೊಂಡಿದ್ದಾರೆ. 

Published: 12th September 2019 01:58 PM  |   Last Updated: 12th September 2019 02:13 PM   |  A+A-


Rajeev Dhavan

ರಾಜೀವ್ ಧವನ್

Posted By : Manjula VN
Source : The New Indian Express

ನವದೆಹಲಿ: ಅಯೋಧ್ಯೆ ವಿವಾದ ಸಂಬಂಧ ಮುಸ್ಲಿಂ ಪರ ವಕಾಲತ್ತು ವಹಿಸಿದ್ದಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸುನ್ನಿ ವಕ್ಫ್ ಬೋರ್ಡ್ ಹಾಗೂ ಇನ್ನಿತರ ಮುಸ್ಲಿಂ ಅರ್ಜಿದಾರರ ಪರ ವಕೀಲ ರಾಜೀವ್ ಧವನ್ ಅವರು ಗುರುವಾರ ಸುಪ್ರೀಂಕೋರ್ಟ್ ಬಳಿ ಹೇಳಿಕೊಂಡಿದ್ದಾರೆ. 

ಅಯೋಧ್ಯೆ ವಿವಾದ ಸಂಬಂಧ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಮಾತನಾಡಿರುವ ಧವನ್ ಅವರು, ವಾರಗಳ ಹಿಂದೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆಯ ಸಂದೇಶಗಳು ಬರುತ್ತಿವೆ. ನ್ಯಾಯಾಲಯದಿಂದ ಹೊರ ಬಂದ ಬಳಿಕ ನೋಡಿಕೊಳ್ಳುತ್ತೇವೆಂದು ಹೇಳುತ್ತಿದ್ದಾರೆಂದು ಹೇಳಿದ್ದಾರೆ. 

ನೀನು ಯಾರ ಪರವಾಗಿದ್ದೀಯಾ? ರಾಮನ ವಿರುದ್ಧವಿದೆಯಾ? ಎಂದು ಪ್ರಶ್ನಿಸುತ್ತಿದ್ದಾರೆ. ಈ ರೀತಿಯ ವಿಚಾರಗಳು ಉತ್ತಮ ವಾತಾವರಣವನ್ನು ಸೃಷ್ಟಿಸುವುದಿಲ್ಲ. ನಾನು ಒತ್ತಡದಲ್ಲಿದ್ದೇನೆಂದು ತಿಳಿಸಿದ್ದಾರೆ. 

ಧವನ್ ಅವರ ಹೇಳಿಕೆಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೊಯ್ ಅವರು, ಬೆದರಿಕೆ ಕರೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ರೀತಿ ಮರುಕಳುಹಿಸಬಾರದು ಎಂದು ಹೇಳಿದ್ದಾರೆ. 

ದೇಶದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯಬಾರದು. ನ್ಯಾಯಾಲಯದಲ್ಲಿ ಎರಡೂ ಕಡೆಗಳಲ್ಲೂ ನಿರ್ಭೀತಿಯಿಂದ ವಾದ ಮಂಡನೆಯಾಗಬೇಕು ಎಂದಿದ್ದಾರೆ. ಇದೇ ವೇಳೆ ಭದ್ರತೆ ಹಾಗೂ ರಕ್ಷಣೆ ಬೇಕೇ ಎಂದೂ ಕೂಡ ಧವನ್ ಅವರನ್ನು ಕೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಧವನ್ ಅವರು, ನ್ಯಾಯಾಲಯದ ಭರವಸೆಯಷ್ಟೇ ಸಾಕು. ಭದ್ರತೆ, ರಕ್ಷಣೆ ಬೇಡ. ಕೇವಲ ನನಗಷ್ಟೇ ಅಲ್ಲ, ನನ್ನ ಸಿಬ್ಬಂದಿಗಳಿಗೂ ಬೆದರಿಕೆ ಕರೆಗಳು ಬರುತ್ತಿವೆ. ಒಂದನ್ನು ನಾನು ಸ್ಪಷ್ಟಪಡಿಸಲು ನಾನು ಇಷ್ಟಪಡುತ್ತೇನೆ, ನಾನು ಹಿಂದೂಗಳ ನಂಬಿಕೆಯ ವಿರುದ್ಧವಿಲ್ಲ ಎಂದು ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp