ಇದು 'ಇಂಡಿಯಾ', ಹಿಂದಿಯಾ ಅಲ್ಲ: ಅಮಿತ್ ಶಾ ವಿರುದ್ಧ ಎಂಕೆ ಸ್ಟಾಲಿನ್ ಕಿಡಿ!

ಭಾರತವನ್ನು ಒಗ್ಗೂಡಿಸಲು ಶಕ್ತಿ ಇದೆ ಎಂದಾದರೆ ಅದು ಹಿಂದಿ ಭಾಷೆಗೆ ಮಾತ್ರ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಎಂಕೆ ಸ್ಟಾಲಿನ್ ಕಿಡಿಕಾರಿದ್ದಾರೆ.
ಎಂಕೆ ಸ್ಟಾಲಿನ್
ಎಂಕೆ ಸ್ಟಾಲಿನ್

ಚೆನ್ನೈ: ಭಾರತವನ್ನು ಒಗ್ಗೂಡಿಸಲು ಶಕ್ತಿ ಇದೆ ಎಂದಾದರೆ ಅದು ಹಿಂದಿ ಭಾಷೆಗೆ ಮಾತ್ರ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಎಂಕೆ ಸ್ಟಾಲಿನ್ ಕಿಡಿಕಾರಿದ್ದಾರೆ.

ರಾಷ್ಟ್ರದ ಪ್ರತೀಕವಾಗಿಸಲು ಒಂದು ಸಾಮಾನ್ಯ ಭಾಷೆ ಹೊಂದುವ ಅವಶ್ಯಕತೆ ಇದೆ. ಹಿಂದಿ ಭಾಷೆ ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಭಾಷೆಯಾಗಿದೆ. ಎಲ್ಲರೂ ಅರ್ಥ ಮಾಡಿಕೊಳ್ಳುವಂತಹ ಭಾಷೆಯಾಗಿದ್ದು ದೇಶವನ್ನು ಒಗ್ಗೂಡಿಸಲು ಸಾಮರ್ಥ್ಯ ಹೊಂದಿರುವುದು ಹಿಂದಿ ಭಾಷೆಗೆ ಮಾತ್ರ ಎಂದು ಅಮಿತ್ ಶಾ ಹೇಳಿದ್ದರು. 

ಅಮಿತ್ ಶಾ ಅವರ ಈ ಹೇಳಿಕೆ ಇದೀಗ ದಕ್ಷಿಣ ಭಾರತದಲ್ಲಿ ಬೆಂಕಿಯ ಕಿಡಿ ಹೊತ್ತಿಸಿದ್ದು. ತಮಿಳುನಾಡು ಪ್ರತಿಪಕ್ಷದ ನಾಯಕ ಎಂಕೆ ಸ್ಟಾಲಿನ್ ಕಿಡಿಕಾರಿದ್ದಾರೆ. ಇದು ಇಂಡಿಯಾ ಹೊರತು ಹಿಂದಿಯಾ ಅಲ್ಲ ಎಂದು ಕಿಡಿಕಾರಿದ್ದಾರೆ. 

ಭಾಷಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟನೆ ನೀಡದಿದ್ದರೆ ಮತ್ತೊಂದು ಭಾಷಾ ಯುದ್ಧವೇ ನಡೆಯುತ್ತದೆ. ಹಿಂದಿ ಏರಿಕೆಯಿಂದ ನಮ್ಮ ಹಕ್ಕಿಗೆ ಧಕ್ಕೆ ಬಂದರೆ, ರಾಜ್ಯವನ್ನೇ ಒಗ್ಗೂಡಿಸುವಲ್ಲಿ ಡಿಎಂಕೆ ಪಕ್ಷ ಹಿಂಜರಿಯಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com