ದೇಶದ 50 ಪ್ರಮುಖ ರೈಲು ಮಾರ್ಗಗಳ ಖಾಸಗೀಕರಣಕ್ಕೆ ಚಿಂತನೆ

ರೈಲ್ವೆ ಇಲಾಖೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು 50 ಪ್ರಮುಖ ರೈಲು ಮಾರ್ಗಗಳನ್ನು ಖಾಸಗೀಕರಣ ಮಾಡಲು ಗಂಭೀರ ಚಿಂತನೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರೈಲ್ವೆ ಇಲಾಖೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು 50 ಪ್ರಮುಖ ರೈಲು ಮಾರ್ಗಗಳನ್ನು ಖಾಸಗೀಕರಣ ಮಾಡಲು ಗಂಭೀರ ಚಿಂತನೆ ಮಾಡಿದೆ.
  
ಈ ಸಂಬಂಧ ಕಳೆದ ಶುಕ್ರವಾರ ರೈಲ್ವೆ ಮಂಡಳಿಯ ಅಧಿಕಾರಿಗಳು ಯಾವ ಯಾವ ಮಾರ್ಗಗಳನ್ನು ಖಾಸಗಿಯವರಿಗೆ ವಹಿಸಿಕೊಡಬಹುದು ಎಂಬ ಬಗ್ಗೆ ಸಾಧಕ ಬಾಧಕ ಕುರಿತು ಚರ್ಚೆ ಮಾಡಿದ್ದಾರೆ ಎಂದು ರೈಲ್ವೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
  
ದೆಹಲಿ – ಮುಂಬೈ, ದೆಹಲಿ – ಲಕ್ನೋ, ದೆಹಲಿ – ಜಮ್ಮು, ದೆಹಲಿ – ಹೌರಾ, ದೆಹಲಿ – ಸಿಕಂದರಾಬಾದ್ ಮಾರ್ಗಗಳೂ ಸೇರಿದಂತೆ ಒಟ್ಟು 50 ಪ್ರಮುಖ ಮಾರ್ಗಗಳಲ್ಲಿ ಖಾಸಗಿಯವರಿಂದ ರೈಲು ಸಂಚಾರ ಆರಂಭಿಸಲು ಹಾಗೂ ಈ ಮೂಲಕ ಇಲಾಖೆಯ ಆದಾಯವನ್ನು ಹೆಚ್ಚಿಸಿಕೊಳ್ಳಲು ರೈಲ್ವೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
  
ಈಗಾಗಲೇ ಇಲಾಖೆಯ ನೂರು ದಿನಗಳ ಕಾರ್ಯಯೋಜನೆಯಲ್ಲಿ ಈ ಅಂಶವೂ ಸೇರಿದ್ದು ಇದಕ್ಕೆ ರೈಲ್ವೆ ಸಚಿವಾಲಯ ತಾತ್ವಿಕವಾಗಿ ಸಮ್ಮತಿ ನೀಡಿದೆ ಎಂದು ಹೇಳಲಾಗಿದೆ. ದೂರದ ಊರುಗಳಿಗೆ ಹೋಗುವ ರೈಲುಗಳನ್ನು ಖಾಸಗಿಕರಣ ಮಾಡುವುದರ ಜೊತೆಗೆ ಮುಂಬೈ, ದೆಹಲಿ , ಚೆನ್ನೈ, ಸಿಕಂದರಾಬಾದ್ ನಗರಗಳ ರೈಲು ಸಂಚಾರವನ್ನೂ ಸಹ ಖಾಸಗಿಯವರಿಗೆ ವಹಿಸಿಕೊಡಲು ರೈಲ್ವೆ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು ಈ ಸಂಬಂಧ ಮುಂದಿನ ವಾರ ಖಾಸಗಿ ಪ್ರವಾಸಿ ಸಂಸ್ಥೆಗಳಿಂದ ಟೆಂಡರ್ ಕರೆಯಲು ರೈಲ್ವೆ ಮಂಡಳಿಯ ಅಧಿಕಾರಿಗಳು ಚಿಂತನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com