ಕೊರೋನಾ ವೈರಸ್: 24 ಗಂಟೆಗಳಲ್ಲಿ 525 ಪ್ರಕರಣ: ಒಟ್ಟಾರೆ 3,000 ಸೋಂಕಿತರು, 75 ಸಾವು! 

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ ನ ಹೊಸ 525 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ವೈರಾಣು ಸೋಂಕಿತರ ಸಂಖ್ಯೆ ಏ.04 ರಂದು 3,000 ಕ್ಕೆ ಏರಿಕೆಯಾಗಿದೆ. 
ಕೊರೋನಾ ವೈರಸ್: 24 ಗಂಟೆಗಳಲ್ಲಿ 525 ಪ್ರಕರಣ: ಒಟ್ಟಾರೆ 3,000 ಸೋಂಕಿತರು, 75 ಸಾವು! 
Updated on

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ ನ ಹೊಸ 525 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ವೈರಾಣು ಸೋಂಕಿತರ ಸಂಖ್ಯೆ ಏ.04 ರಂದು 3,000 ಕ್ಕೆ ಏರಿಕೆಯಾಗಿದೆ. 

24 ಗಂಟೆಗಳಲ್ಲಿ ಏರಿಕೆಯಾಗಿರುವ ಅತಿ ಹೆಚ್ಚು ಪ್ರಕರಣಗಳು ಏ.04 ರಂದು ದಾಖಲಾಗಿದೆ. ಒಂದು ದಿನದಲ್ಲಿ 13 ಸಾವುಗಳು ಸಂಭವಿಸಿದ್ದು, ಕೊರೋನಾದಿಂದ ಉಂಟಾಗಿರುವ ಸಾವಿನ ಸಂಖ್ಯೆ ದೇಶದಲ್ಲಿ 75 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

2,784 ಸಕ್ರಿಯವಾಗಿರುವ ಕೋವಿಡ್-19 ಪ್ರಕರಣಗಳಿದ್ದು, 212 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಓರ್ವ ಸ್ಥಳಾಂತರವಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಒಟ್ಟಾರೆ ವರದಿಯಾಗಿರುವ 3,072 ಪ್ರಕರಣಗಳಲ್ಲಿ 57 ಜನರು ವಿದೇಶಿ ನಾಗರಿಕರಾಗಿದ್ದಾರೆ.

ಬೇರೆ ಯಾವುದೇ ರಾಷ್ಟ್ರಕ್ಕಿಂತಲೂ ಭಾರತದಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಕಡಿಮೆಯಿದ್ದು ಜನರು ಭಯಪಡಬೇಕಾದ ಅಗತ್ಯವಿಲ್ಲ, ಸೋಂಕು ಪರೀಕ್ಷೆ ಸಾಮರ್ಥ್ಯವನ್ನು ದಿನವೊಂದಕ್ಕೆ 10,000 ಪರೀಕ್ಷೆಗಳಿಗೆ ಏರಿಕೆಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 

1,023 ತಬ್ಲಿಘಿ ಜಮಾತ್ ಗೆ ಸಂಬಂಧಿಸಿದ ಪ್ರಕರಣಗಳಾಗಿದ್ದು, ಅಧಿಕಾರಿಗಳ ನಿರಂತರ ಶ್ರಮದಿಂದಾಗಿ ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಹಾಗೂ ಅವರ ಪ್ರಾಥಮಿಕ ಸಂಪರ್ಕಗಳೂ ಸೇರಿ ಒಟ್ಟಾರೆ 22,000 ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸುವುದು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ತಬ್ಲಿಘಿ ಸಂಬಂಧಿತ ಪ್ರಕರಣಗಳಿಂದ ತಗುಲಿರುವ ಸೋಂಕುಗಳು 17 ರಾಜ್ಯಗಳಲ್ಲಿ ವರದಿಯಾಗಿದ್ದು, ಶೇ.30 ರಷ್ಟು ಮಂದಿ ಒಂದೇ ಸ್ಥಳದವರಾಗಿದ್ದು, ಈ ವರೆಗೂ ಅದನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಈ ವರೆಗೂ 75,೦೦೦ ಪರೀಕ್ಷೆಗಳನ್ನು ನಡೆಸಲಾಗಿದ್ದು ದಿನವೊಂದಕ್ಕೆ 10,000 ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com