ಮಾಸ್ಕ್ ಮೇಲೆ 7 ದಿನ, ನೋಟ್ ಮೇಲೆ 2 ದಿನ ಇರುತ್ತೆ ಕೊರೋನಾ ವೈರಸ್!`

ಮಾಸ್ಕ್ ಮೇಲೆ ಕೊರೋನಾ ವೈರಸ್ ಗರಿಷ್ಠ 7 ದಿನ, ಗಾಜು ಹಾಗೂ ಕರೆನ್ಸಿ ನೋಟುಗಳ ಮೇಲೆ ಗರಿಷ್ಠ 2 ದಿನ ಮತ್ತು ಪ್ಲಾಸ್ಟಿಕ್, ಸ್ಟೀಲ್ ವಸ್ತುಗಳ ಮೇಲೆ 4 ರಿಂದ 7 ದಿನಗಳ ವರೆಗೆ ಜೀವಂತವಾಗಿರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಮಾಸ್ಕ್ ಮೇಲೆ ಕೊರೋನಾ ವೈರಸ್ ಗರಿಷ್ಠ 7 ದಿನ, ಗಾಜು ಹಾಗೂ ಕರೆನ್ಸಿ ನೋಟುಗಳ ಮೇಲೆ ಗರಿಷ್ಠ 2 ದಿನ ಮತ್ತು ಪ್ಲಾಸ್ಟಿಕ್, ಸ್ಟೀಲ್ ವಸ್ತುಗಳ ಮೇಲೆ 4 ರಿಂದ 7 ದಿನಗಳ ವರೆಗೆ ಜೀವಂತವಾಗಿರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 

ವಾತಾವರಣದಲ್ಲಿ ಕೊರೋನಾ ಸ್ಥಿರತೆ ಕುರಿತಂತೆ ಯುನಿವರ್ಸಿಟಿ ಆಫ್ ಹಾಂಕಾಂಗ್ ಸಂಶೋಧಕರು ಸಮೀಕ್ಷೆ ನಡೆಸಿದೆ. ಮುದ್ರಣ ಯಂತ್ರ ಮತ್ತು ಟಿಶ್ಯೂ ಪೇಪರ್ ಮೇಲೆ ಹವಾಗುಣ ಆಧರಿಸಿ ಮೂರು ಗಂಟೆಗಿಂತ ಕಡಿಮೆ ಕಾಲ ಹಾಗೂ ಮರ, ಬಟ್ಟೆಯ ಮೇಲೆ 2 ದಿನ ಬದುಕಿರುತ್ತದೆ. ಬ್ಲೀಚಿಂಗ್ ಪೌಡರ್, ಸ್ಯಾನಿಟೈಜರ್ ಬಳಸುವುದರಿಂದಲೂ ಕೊರೋನಾ ವೈರಸನ್ನು ನಿಗ್ರಹಿಸಬಹುದು ಎಂದು ಹೇಳಿದೆ. 

ಸರ್ಜಿಕಲ್ ಮಾಸ್ಕ್ ಧರಿಸುವ ಜನರು ಮಾಸ್ಕ್ ಗಳ ಹೊರಗೆ ಮುಟ್ಟದಂತೆ ಇರುವುದು ಅತ್ಯಂತ ಮುಖ್ಯವಾಗುತ್ತದೆ. ಒಂದು ವೇಳೆ ಮಾಸ್ಕ್ ಗಳ ಹೊರಗಿನ ಭಾಗವನ್ನು ಮುಟ್ಟಿದ್ದೇ ಆದರೆ, ವೈರಸ್ ತಗುಲಿ ಅದು ಕಣ್ಣು, ಬಾಯಿ, ಮೂಗಿನ ಮೂಲಕ ದೇಹವನ್ನು ಸುಲಭವಾಗಿ ಪ್ರವೇಶಿಸುತ್ತದೆ ಎಂದಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com