ತಬ್ಲಿಘಿ ಜಮಾತ್ ನಿಂದ ಪ್ರಧಾನಿ ಮೋದಿ ವಿರುದ್ಧ ಪಿತೂರಿ: ಮುಸ್ಲಿಂ ನಾಯಕನಿಂದ ಗಂಭೀರ ಆರೋಪ, ಕಾನೂನು ಕ್ರಮಕ್ಕೆ ಆಗ್ರಹ 

ತಬ್ಲಿಘಿ ಜಮಾತ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಮುಸ್ಲಿಂ ನಾಯಕರೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊರೋನಾ ಭೀತಿಯ ನಡುವೆ, ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಕಾರ್ಯಕ್ರಮ ನಡೆಸಿದ್ದಕ್ಕೆ ತಬ್ಲಿಘಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. 
ತಬ್ಲಿಘಿ ಜಮಾತ್ ನಿಂದ ಪ್ರಧಾನಿ ಮೋದಿ ವಿರುದ್ಧ ಪಿತೂರಿ: ಮುಸ್ಲಿಂ ನಾಯಕನಿಂದ ಗಂಭೀರ ಆರೋಪ!
ತಬ್ಲಿಘಿ ಜಮಾತ್ ನಿಂದ ಪ್ರಧಾನಿ ಮೋದಿ ವಿರುದ್ಧ ಪಿತೂರಿ: ಮುಸ್ಲಿಂ ನಾಯಕನಿಂದ ಗಂಭೀರ ಆರೋಪ!
Updated on: 

ನವದೆಹಲಿ: ತಬ್ಲಿಘಿ ಜಮಾತ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಮುಸ್ಲಿಂ ನಾಯಕರೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊರೋನಾ ಭೀತಿಯ ನಡುವೆ, ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಕಾರ್ಯಕ್ರಮ ನಡೆಸಿದ್ದಕ್ಕೆ ತಬ್ಲಿಘಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. 

ತಬ್ಲಿಘಿ ಜಮಾತ್ ನ ಬಗ್ಗೆ ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಬೋರ್ಡ್ ನ ಅಧ್ಯಕ್ಷ ವಾಸೀಮ್ ರಿಜ್ವಿ ಮಾತನಾಡಿದ್ದು, ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ಧಾರ್ಮಿಕ ಸಭೆ ಆಯೋಜಿಸಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. 

ಇದೇ ವೇಳೆ ತಬ್ಲಿಘಿ ಜಮಾತ್ ನ ವಿರುದ್ಧ ಗಂಭೀರ ಆರೋಪ ಮಾಡಿರುವ ವಾಸೀಮ್ ರಿಜ್ವಿ, ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಪಿತೂರಿ ಇದಾಗಿದೆ. ತಬ್ಲಿಘಿ ಜಮಾತ್ ಕೊರೋನಾ ವೈರಸ್ ಹರಡುವುದರ ಮೂಲಕ ದೇಶದ ಮೇಲೆ ದಾಳಿಗೆ ಯೋಜನೆ ರೂಪಿಸಿತ್ತು, ವೈರಸ್ ಹರಡುವುದರ ಮೂಲಕ ಒಂದು ಲಕ್ಷ ಜನರನ್ನು ಕೊಲ್ಲಲು ಜಮಾತ್ ನವರು ಸಂಚು ರೂಪಿಸಿದ್ದರು ಎಂದು ಹೇಳಿದ್ದಾರೆ. 

"ತಬ್ಲಿಘಿ ಸಭೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಯೋಜಿಸಿತ್ತು. ಇದು ಪ್ರಧಾನಿ ಮೋದಿ ವಿರುದ್ಧದ ಪಿತೂರಿ ಎಂದು ರಿಜ್ವಿ ಆರೋಪಿಸಿದ್ದಾರೆ. 

ಇನ್ನು ಆರೋಗ್ಯ ಸಿಬ್ಬಂದಿಗಳ ಜೊತೆ ಅಸಭ್ಯ ವರ್ತನೆ ತೋರಿದ್ದಕ್ಕೆ ತಬ್ಲಿಘಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ರಿಜ್ವಿ. ತಬ್ಲಿಘಿಗಳ ನಡೆ ವೈದ್ಯಕೀಯ ಸಿಬ್ಬಂದಿಗಳ ಸ್ಥೈರ್ಯ ಕುಗ್ಗಿಸಿ, ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲು ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಂಡಿದ್ದಾರೆ, ಆರೋಪಿಗಳಿಗೆ ಕಾನೂನು ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. 

ತಬ್ಲಿಘಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಮಾರಣಾಂತಿಕ ವೈರಸ್ ನ್ನು ಉದ್ದೇಶಪೂರ್ವಕವಾಗಿ ಹರಡಿರುವುದಕ್ಕೆ ಅವರಿಂದಲೇ  ಪರಿಹಾರ ಹಣವನ್ನು ಪಡೆಯಬೇಕೆಂದು ರಿಜ್ವಿ ಆಗ್ರಹಿಸಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com