ಚೆನ್ನೈ: ಕೊರೋನಾ ಸೋಂಕಿನಿಂದ ಇಂಡಿಗೋ ನೌಕರ ಸಾವು

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಚೆನ್ನೈ ಮೂಲದ ನೌಕರರೊಬ್ಬರು ಸಾವನ್ನಪ್ಪಿದ್ದಾರೆಂದು ಇಂಡಿಗೋ ಶನಿವಾರ ಹೇಳಿಕೆ ನೀಡಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಚೆನ್ನೈ ಮೂಲದ ನೌಕರರೊಬ್ಬರು ಸಾವನ್ನಪ್ಪಿದ್ದಾರೆಂದು ಇಂಡಿಗೋ ಶನಿವಾರ ಹೇಳಿಕೆ ನೀಡಿದೆ.
 
ವಿಮಾನಗಳಲ್ಲಿ ನಿರ್ವಹಣಾ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನೌಕರ ಶುಕ್ರವಾರ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆಂದು ಇಂಡಿಗೋ ಹೇಳಿದ್ದು, ನೌಕರನ ಕುರಿತ ಇನ್ನಿತರೆ ಮಾಹಿತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ. 

ಮೃತಪಟ್ಟಿರುವ ವ್ಯಕ್ತಿ 2006ರಿಂದಲೂ ಇಂಡಿಗೋ ವಿಮಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಚೆನ್ನೈನ ವಿಮಾನ ನಿಲ್ದಾಣದಲ್ಲಿ ನಿರ್ವಹಣಾ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. 

ಚೆನ್ನೈನಲ್ಲಿ ನಮ್ಮ ಸಂಸ್ಥೆ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ನೌಕರರೊಬ್ಬರು ಸೋಂಕಿನಿಂದಾಗಿ ಸಾವನ್ನಪ್ಪಿರುವುದು ಸಾಕಷ್ಟು ನೋವು ತಂದಿದೆ ಎಂದು ಏರ್ ಲೈನ್ಸ್ ವಕ್ತಾರರು ಹೇಳಿಕೆ ನೀಡಿದ್ದಾರೆ. 

ವಿಮಾನಯಾನ ಸಿಬ್ಬಂದಿಯೊಬ್ಬರು ಕೊರೋನಾ ವೈರಸ್'ಗೆ ಸಾವನ್ನಪ್ಪಿರುವುದು ಇದೇ ಮೊದಲ ಪ್ರಕರಣವೆಂದು ಹೇಳಲಾಗುತ್ತಿದೆ.  

ಇಂಡಿಗೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತೀಯೊಬ್ಬರಿಗೂ ಇದೊಂದು ಹೃದಯವಿದ್ರಾವಕ ಘಟನೆಯಾಗಿದೆ. ಈ ದುಃಖಕರ ಸಂದರ್ಭದಲ್ಲಿ ಮೃತ ವ್ಯಕ್ತಿಯ ಕುಟುಂಬದೊಂದಿಗೆ ನಾವು ನಿಲ್ಲುತ್ತೇವೆ. ನಮ್ಮ ನೌಕರ ಹಾಗೂ ಅವರು ಕುಟುಂಬದ ಖಾಸಗಿತನವನ್ನು ನಾವು ಗೌರವಿಸುತ್ತೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com