ದೂರದರ್ಶನದಿಂದ ಹೊಸ ಚಾನಲ್ ಡಿಡಿ ರೆಟ್ರೋ ಪ್ರಾರಂಭ: ಜನಪ್ರಿಯ ಶೋಗಳ ಮರು ಪ್ರಸಾರ!

ರಾಮಾಯಣ, ಮಹಾಭಾರತ ಧಾರವಾಹಿಗಳು ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನಲ್ ಗೆ ಅಭೂತಪೂರ್ವ ಟಿಆರ್ ಪಿ ತಂದುಕೊಟ್ಟಿದ್ದು, ಡಿಡಿ ನ್ಯಾಷನಲ್ ನಂ.1 ಚಾನಲ್ ಆಗಿದೆ. 
ದೂರದರ್ಶನದಿಂದ ಹೊಸ ಚಾನಲ್ ಡಿಡಿ ರೆಟ್ರೋ ಪ್ರಾರಂಭ: ಜನಪ್ರಿಯ ಶೋಗಳ ಮರು ಪ್ರಸಾರ!
ದೂರದರ್ಶನದಿಂದ ಹೊಸ ಚಾನಲ್ ಡಿಡಿ ರೆಟ್ರೋ ಪ್ರಾರಂಭ: ಜನಪ್ರಿಯ ಶೋಗಳ ಮರು ಪ್ರಸಾರ!

ನವದೆಹಲಿ: ರಾಮಾಯಣ, ಮಹಾಭಾರತ ಧಾರವಾಹಿಗಳು ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನಲ್ ಗೆ ಅಭೂತಪೂರ್ವ ಟಿಆರ್ ಪಿ ತಂದುಕೊಟ್ಟಿದ್ದು, ಡಿಡಿ ನ್ಯಾಷನಲ್ ನಂ.1 ಚಾನಲ್ ಆಗಿದೆ. 

ಇದರಿಂದ ಉತ್ತೇಜನಗೊಂಡಿರುವ ದೂರದರ್ಶನ, ಹಳೆಯ ಜನಪ್ರಿಯ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವುದಕ್ಕಾಗಿಯೇ ಡಿಡಿ ರೆಟ್ರೋ ಚಾನಲ್ ನ್ನು ಪ್ರತ್ಯೇಕವಾಗಿ ಪ್ರಾರಂಭಿಸುತ್ತಿದೆ. 

ಡಿಡಿ ಚಾನಲ್ ನ ಅಧಿಕೃತ ಟ್ವಿಟರ್ ನಲ್ಲಿ ಟ್ವೀಟ್ ಮಾಡಲಾಗಿದ್ದು, ದಶಕಗಳ ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳಲು ಜನಪ್ರಿಯ, ಸ್ಮರಣೀಯ ಧಾರಾವಾಹಿಗಳನ್ನು ಮರುಪ್ರಸಾರ ಮಾಡಲಾಗುತ್ತದೆ. ಇದಕ್ಕಾಗಿ ಡಿಡಿ ರೆಟ್ರೋ ವೀಕ್ಷಿಸಿ ಎಂದು ಹೇಳಿದೆ. 

ಎಲ್ಲಾ ಡಿಟಿಎಚ್ ಗಳಲ್ಲಿಯೂ ಡಿಡಿ ರೆಟ್ರೋ ಚಾನಲ್ ಲಭ್ಯವಿರಲಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com