ಪಶ್ಚಿಮ ಬಂಗಾಳ: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿ, ತಾಯಿ ನೋಡಲು ಬಂದ ಮಹಿಳೆಗೆ ಗ್ರಾಮದಿಂದಲೇ ಬಹಿಷ್ಕಾರ! 

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳನ್ನೇ ಇದೀಗ ಜನರು ದೂರ ಇಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲ್ಕತಾ: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳನ್ನೇ ಇದೀಗ ಜನರು ದೂರ ಇಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. 

ಕೋಲ್ಕತಾದಲ್ಲಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಅನುದಾನಿತ ಆರೋಗ್ಯ ಘಟಕ ಬಿಜಿ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ, ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 

ಕೋಲ್ಕತಾದಿಂದ 80 ಕಿ.ಮೀ ದೂರದಲ್ಲಿರುವ ನದಿಯಾದ ರಾಣಾಘಾಟ್ ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಯಾಗಿ ಕರ್ತವ್ಯನಿರ್ಹವಿಸುತ್ತಿದ್ದಾರೆ. ಪ್ರತೀವಾರ ವಾರಾಂತ್ಯದ ಸಮಯಕ್ಕೆ ಊರಿಗೆ ಬಂದು ಸಹೋದರಿ ಹಾಗೂ ತಾಯಿಯನ್ನು  ನೋಡುತ್ತಿರುತ್ತಾರೆ. ಇದರಂತೆ ಕಳೆದ ವಾರ ಕೂಡ ತನ್ನ ತಾಯಿ ಹಾಗೂ ಸಹೋದರಿಯನ್ನು ನೋಡುವ ಸಲುವಾಗಿ ಗ್ರಾಮಕ್ಕೆ ಬಂದಿದ್ದಾರೆ. ಆದರೆ, ಊರಿನ ಗ್ರಾಮಸ್ಥರು ಹಾಗೂ ನೆರೆಮನೆಯವರೂ ಇದಕ್ಕೆ ಅವಕಾಶ ನೀಡಿಲ್ಲ. 

ಜನರ ಮನವೊಲಿಸಲು ನಾನು ಪ್ರಯತ್ನ ಮಾಡಿದೆ. ಆದರೆ, ಅವರು ಕೇಳಲು ಸಿದ್ಧರಿರಲಿಲ್ಲ. ಸರ್ಕಾರ ಮಾರ್ಗಸೂಚೆಗಳನ್ನು ಅನುಸರಿಸಿದ್ದು, ಆಸ್ಪತ್ರೆಯಿಂದ ಹೊರಬರುವುದಕ್ಕೂ ಮುನ್ನ ದೇಹ ಪೂರ್ತಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ಹೇಳಿದರೂ ಅವರು ಕೇಳಲಿಲ್ಲ. ಬಳಿಕ ರಾಣಾಘಾಟ್ ಟೌನ್ ನಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ರಾತ್ರಿ ಕಳೆದು ಮರಳಿ ಕೋಲ್ಕತಾಗೆ ಮರಳಿದ್ದೆ ಎಂದು ಚಿತ್ರ ಹೇಳಿದ್ದಾರೆ. 

ಗ್ರಾಮಸ್ಥರ ಕೆಟಟ ವರ್ತನೆಯಿಂದ ನನ್ನ ತಾಯಿ ಹಾಗೂ ಸಹೋದರಿ ಆತಂಕಕ್ಕೊಳಗಾಗಿದ್ದಾರೆ. ನನ್ನೊಂದಿಗೆ ಯಾರೂಮಾತನಾಡುತ್ತಿಲ್ಲ. ಅಗತ್ಯ ವಸ್ತುಗಳಿಗಾಗಿ ಅವರು ಹೊರಗೆ ಅಂಗಡಿಗೆ ಹೋದರೆ, ಏನಾಗಬಹುದು ಎಂಬುದು ನನಗೆ ಭಯವಾಗುತ್ತಿದೆ ಎಂದು ಚಿತ್ರ ಹೇಳಿದ್ದಾರೆ. 

ಘಟನೆ ಕುರಿತು ನವೊಪರ-ಮುಶುಂಡಿ ಗ್ರಾಮ ಪಂಚಾಯತ್ ಉಪ ಮುಖ್ಯಸ್ಥ ನಬಿನ್ ಚಂದ್ರ ಮೊಂಡಲ್ ಮಾತನಾಡಿ, ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಾಗಿದೆ. ಸಾಕಷ್ಟು ಗ್ರಾಮಸ್ಥರೂ ಕೂಡ ನನ್ನ ಮನೆಗೆ ಬಂದು ಮಾತುಕತೆ ನಡೆಸಿದ್ದಾರೆ. ಮನೆಯಲ್ಲಿರಲು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಗ್ರಾಮಕ್ಕೆ ತೆರಳಿದಾಗ ಕೆಲವರ ಮನವೊಲಿಸಿದೆ. ಆದರೆ, ಕೆಲವರು ಮಾತನ್ನು ಕೇಳುತ್ತಿದ್ದ. ಸಾಕಷ್ಟು ಮಂದಿ ಆಕೆಗೆ ಮನೆಗೆ ತೆರಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com