
ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿ ಮಹಿಳೆಯ ನೆರವಿಗೆ ದಾವಿಸಿದ್ದು ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಪೊಲೀಸರ ಜೀಪ್ ನಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.
ಪಶ್ಚಿಮ ದೆಹಲಿಯ ಕಲಾಯಾದಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ಗರ್ಭಿಣಿ ಮಹಿಳೆ ಕುಟುಂಬದ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ಆ್ಯಂಬುಲೇನ್ಸ್ ಕರೆಸುವಂತೆ ಮಹಿಳಾ ಪೇದೆ ಸುಮನ್ ಎಂಬವರಿಗೆ ಮನವಿ ಮಾಡಿದ್ದರು.
ಕೂಡಲೇ ಮಹಿಳಾ ಪೇದೆ ತಮ್ಮ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದ್ದು ಗರ್ಭಿಣಿ ಮಹಿಳೆಯ ನೆರವಿಗೆ ಪೊಲೀಸ್ ಜೀಪ್ ಅನ್ನು ಕಳುಹಿಸಿದ್ದರು. ಜೀಪ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಿನಿ ಕುಮಾರಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಡಿಸಿಪಿ ದೀಪಕ್ ಪುರೋಹಿತ್ ಹೇಳಿದ್ದಾರೆ.
ಆಸ್ಪತ್ರೆಗೆ ಇನ್ನು ಕೇವಲ 1 ಕಿ.ಮೀ ದೂರವಿರಬೇಕಾದಾಗಲೇ ಮಿನಿ ಕುಮಾರಿ ಮಗುವಿಗೆ ಜನ್ಮ ನೀಡಿದರು. ಆಕೆಯ ಗಂಡ ಮತ್ತು ಸಹೋದರಿ ಮಗುವನ್ನು ಹೊರಗೆ ಎಳೆದರು. ಈ ವೇಳೆ ಮಹಿಳೆ ಪೇದೆ ಸಹ ಸಹಾಯ ಮಾಡಿದ್ದಾರೆ.
Advertisement