ಸಮಾಲೋಚನಾ ತಂಡ ರಚಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ: ಮಾಜಿ ಪ್ರಧಾನಿ ಡಾ.ಸಿಂಗ್ ಅಧ್ಯಕ್ಷ

ಕಾಂಗ್ರೆಸ್ ನ ಅಧ್ಯಕ್ಷ್ಯೆ ಸೋನಿಯಾ ಗಾಂಧಿ ಕಾಂಗ್ರೆಸ್ ಸಮಾಲೋಚನಾ ತಂಡವನ್ನು ರಚಿಸಿದ್ದು, ಮಾಜಿ ಪ್ರಧಾನಿ  ಮನಮೋಹನ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. 
ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್
Updated on: 

ನವದೆಹಲಿ: ಕಾಂಗ್ರೆಸ್ ನ ಅಧ್ಯಕ್ಷ್ಯೆ ಸೋನಿಯಾ ಗಾಂಧಿ ಕಾಂಗ್ರೆಸ್ ಸಮಾಲೋಚನಾ ತಂಡವನ್ನು ರಚಿಸಿದ್ದು, ಮಾಜಿ ಪ್ರಧಾನಿ  ಮನಮೋಹನ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. 

ಪ್ರಮುಖ ವಿಚಾರಗಳ ಬಗ್ಗೆ ಪಕ್ಷದ ನಿಲುವು ಹಾಗೂ ನೀತಿಗಳನ್ನು ರೂಪಿಸಲು ಸೋನಿಯಾ ಗಾಂಧಿ ರಚನೆ ಮಾಡಿರುವ ತಂಡ ಕಾರ್ಯನಿರ್ವಹಿಸಲಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಈ ತಂಡದ ಭಾಗವಾಗಿರಲಿದ್ದು, ರಣ್ ದೀಪ್ ಸುರ್ಜೆವಾಲ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. 
 
ಪಿ.ಚಿದಂಬರಂ, ಮಾಜಿ ಕೇಂದ್ರ ಸಚಿವ ಮನೀಷ್ ತಿವಾರಿ, ಜೈರಾಮ್ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಪ್ರವೀಣ್ ಚಕ್ರವರ್ತಿ, ಗೌರವ್ ವಲ್ಲಭ್, ರೋಹನ್ ಗುಪ್ತ ಸಮಿತಿಯ ಭಾಗವಾಗಿರಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com