ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಗಳನ್ನು ತಿರಸ್ಕರಿಸಿದ ಅಸ್ಸಾಂ! 

ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಬರೊಬ್ಬರಿ 50,000 ಪಿಪಿಇ (ಪರ್ಸ್ನಲ್ ಪ್ರೊಟೆಕ್ಟೀವ್ ಕಿಟ್) ಗಳನ್ನು ಬಳಕೆ ಮಾಡದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. 
ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಗಳನ್ನು ತಿರಸ್ಕರಿಸಿದ ಅಸ್ಸಾಂ!
ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಗಳನ್ನು ತಿರಸ್ಕರಿಸಿದ ಅಸ್ಸಾಂ!
Updated on

ಗುವಾಹಟಿ: ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಬರೊಬ್ಬರಿ 50,000 ಪಿಪಿಇ (ಪರ್ಸ್ನಲ್ ಪ್ರೊಟೆಕ್ಟೀವ್ ಕಿಟ್) ಗಳನ್ನು ಬಳಕೆ ಮಾಡದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. 

ಈ ಮಾಹಿತಿಯನ್ನು ಸ್ವತಃ ಸರ್ಕಾರದ ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮ ಸ್ಪಷ್ಟಪಡಿಸಿದ್ದಾರೆ. ಹಾಗೆ ನೋಡಿದರೆ ಚೀನಾದಿಂದ ನೇರವಾಗಿ ಪಿಪಿಇಗಳನ್ನು ತರಿಸಿಕೊಂಡಿದ್ದ ಮೊದಲ ರಾಜ್ಯ ಅಸ್ಸಾಂ ಆಗಿತ್ತು. ಏ.15 ರಂದು ರಾತ್ರಿ ಖಾಸಗಿ ಸರಕು ಸಾಗಣೆ ವಿಮಾನದ ಮೂಲಕ ಚೀನಾದಿಂದ ನೇರವಾಗಿ ಅಸ್ಸಾಂಗೆ ಪಿಪಿಇಗಳನ್ನು ತರಿಸಲಾಗಿತ್ತು. ಆದರೆ ಚೀನಾದ ಪಿಪಿಇ ಕಿಟ್ ಗಳು ಗುಣಮಟ್ಟದ ಕೊರತೆ ಎದುರಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿದೆ. ಈ ಕಾರಣದಿಂದಾಗಿ ಅವುಗಳನ್ನು ಬಳಕೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಹಿಮಂತ ಬಿಸ್ವಶರ್ಮ ಹೇಳಿದ್ದಾರೆ. 

ಅಷ್ಟೇ ಅಲ್ಲದೇ ಡಿಆರ್ ಡಿಒ ಚೀನಾದ 50,000 ಕಿಟ್ ಗಳನ್ನು ಗುಣಮಟ್ಟದ ಕಾರಣ ನೀಡಿ ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದು ನಾವು ತರಿಸಿಕೊಂಡ ಕಿಟ್ ಗಳೇ ಇರಬಹುದೆಂಬ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ಬಳಕೆ ಮಾಡದಿರಲು ನಿರ್ಧರಿಸಿದ್ದೇವೆ ಎಂದಿದ್ದಾರೆ ಹಿಮಂತ ಬಿಸ್ವ ಶರ್ಮ. 

ಚೀನಾದಿಂದ ತರಿಸಿಕೊಳ್ಳುವುದಕ್ಕೂ ಮುನ್ನ ಅಸ್ಸಾಂ ನಲ್ಲಿ ಕೇವಲ 2,000 ಕಿಟ್ ಗಳಿದ್ದವು, ನಂತರದ ದಿನಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳಿಂದ ಅಸ್ಸಾಂ ಆರೋಗ್ಯ ಇಲಾಖೆ 1,50,000 ಕಿಟ್ ಗಳನ್ನು ತರಿಸಿಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com