ಮಹಾಮಾರಿ ಕೊರೋನಾಗೆ ಸೌದಿಯಲ್ಲಿ ಇಬ್ಬರು ಭಾರತೀಯರು ಬಲಿ

ಸೌದಿ ಅರೇಬಿಯಾದಲ್ಲಿ ಮಹಾಮಾರಿ ಕೊರೋನಾಗೆ ತೆಲಂಗಾಣ ಮೂಲಕ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಸೌದಿ ಅರೇಬಿಯಾದಲ್ಲಿ ಮಹಾಮಾರಿ ಕೊರೋನಾಗೆ ತೆಲಂಗಾಣ ಮೂಲಕ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಬೊವೆನ್ ಪಲ್ಲಿ ನಿವಾಸಿಯಾಗಿದ್ದ ವ್ಯಕ್ತಿ ಸೌದಿಯ ಖಾಸಗಿ ಕಂಪನಿಯಲ್ಲಿ ಕೆಲ ವರ್ಷಗಳಿಂದ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಸತಿ ಗೃಹದಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಸವಿದ್ದರು. ಕೆಲ ದಿನಗಳ ಹಿಂದಷ್ಟೇ ಇವರಲ್ಲಿ ವೈರಸ್ ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 

ಇದರಂತೆ ಮತ್ತೊಬ್ಬ ವ್ಯಕ್ತಿಯನ್ನು ನಿಜಾಮಾಬಾದ್ ನಿವಾಸಿ ಎಂದು ಹೇಳಲಾಗುತ್ತಿದ್ದು, ಇದೀಗ ಇವರ ಅಂತಿಮ ಸಂಸ್ಕಾರವನ್ನು ಸೌದಿ ಅಧಿಕಾರಿಗಳೇ ಮೆಕ್ಕಾದಲ್ಲಿ ನಡೆಸಿದ್ದಾರೆ. 

ಕುಟುಂಬಗಳಿಂದ ಯಾವುದೇ ಮಾಹಿತಿಗಳು ಬರದಿದ್ದ ಕಾರಣ ಸೌದಿಯಲ್ಲಿರುವ ಎನ್'ಜಿಒಗಳೇ ಅಂತಿಮ ಸಂೆಸ್ಕಾರ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. 

ಈ ನಡುವೆ ಕೊರೋನಾ ಕುರಿತಂತೆ ಸೌದಿಯಲ್ಲಿನ ಭಾರತೀಯರ ಬೆಳವಣಿಗೆ ಕುರಿತಂತೆ ಭಾರತೀಯ ರಾಯಭಾರಿ ಕಚೇರಿ ಮಾಡಿರಿ ನೀಡಿದ್ದು, ಈ ವರೆಗೂ ಕೇರಳದ ಇಬ್ಬರು, ಮಹಾರಾಷ್ಟ್ರ ಮೂಲದ ಒಬ್ಬರು ಹಾಗೂ ಉತ್ತರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಹೇಳಿದೆ. 

ಇನ್ನು ಸೌದಿ ಆರೋಗ್ಯ ಸಚಿವಾಲಯ ಕೂಡ ಮಾಹಿತಿ ನೀಡಿದ್ದು, ದೇಶದಲ್ಲಿ ನೆಲೆಯೂರಿರುವ ಇತರೆ ರಾಷ್ಟ್ರಗಳ ಪ್ರಜೆಗಳು ಕೊರೋನಾಗೆ 117 ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಮೆಕ್ಕಾದಲ್ಲಿಯೇ ಹೆಚ್ಚಾಗಿ ಮೃತಪಟ್ಟಿದ್ದಾರೆಂದು ತಿಳಿಸಿದೆ. 

ಈ ಹಿಂದೆ ಸೌದಿಯಲ್ಲಿ ಮೊದಲ ಬಾರಿಗೆ ಕೇರಳ ಮೂಲಕ ಇಬ್ಬರು ವ್ಯಕ್ತಿಗಳು ಮಹಾಮಾರಿಗೆ ಬಲಿಯಾಗಿದ್ದರು. ಇಬ್ಬರನ್ನೂ ಶೆಬ್ನಾಜ್ ಪಾಲಾ ಕಂಡಿಯಿಲ್ (29) ಹಾಗೂ ಶಫ್ವಾನ್ ನದಾಮಾಳ್ (41) ಎಂದು ಗುರ್ತಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com