ಕೊರೋನಾ ವಿರುದ್ಧ ವೈದ್ಯರ ದಿಟ್ಟ ಹೋರಾಟಕ್ಕೆ ಗೃಹ ಸಚಿವ ಅಮಿತ್ ಶಾ ಶ್ಲಾಘನೆ, ಭದ್ರತೆಯ ಭರವಸೆ

ಕೊರೋನಾ ವೈರಸ್ ವಿರುದ್ಧ ದೇಶ ಕಾಯುವ ಯೋಧರಂತೆ ದಿಟ್ಟ ಹೋರಾಟ ಮಾಡುತ್ತಿರುವ ವೈದ್ಯರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಕೊಂಡಾಡಿದ್ದು, ಸೂಕ್ತ ರೀತಿಯ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. 
ಕೊರೋನಾ ವಿರುದ್ಧ ವೈದ್ಯರ ದಿಟ್ಟ ಹೋರಾಟಕ್ಕೆ ಗೃಹ ಸಚಿವ ಅಮಿತ್ ಶಾ ಶ್ಲಾಘನೆ: ಭದ್ರತೆ ಭರವಸೆ
ಕೊರೋನಾ ವಿರುದ್ಧ ವೈದ್ಯರ ದಿಟ್ಟ ಹೋರಾಟಕ್ಕೆ ಗೃಹ ಸಚಿವ ಅಮಿತ್ ಶಾ ಶ್ಲಾಘನೆ: ಭದ್ರತೆ ಭರವಸೆ

ನವದೆಹಲಿ: ಕೊರೋನಾ ವೈರಸ್ ವಿರುದ್ಧ ದೇಶ ಕಾಯುವ ಯೋಧರಂತೆ ದಿಟ್ಟ ಹೋರಾಟ ಮಾಡುತ್ತಿರುವ ವೈದ್ಯರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಕೊಂಡಾಡಿದ್ದು, ಸೂಕ್ತ ರೀತಿಯ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. 

ಭಾರತೀಯ ವೈದ್ಯಕೀಯ ಸಂಘದ ಹಲವು ವೈದ್ಯಕೀಯ ವಕ್ತಾರರೊಂದಿಗೆ ಮಾತಕತೆ ನಡೆಸಿದ ಅವರು, ವೈದ್ಯರ ಉತ್ತಮ ಕಾರ್ಯವನ್ನು ಶ್ಲಾಘಿಸಿದ್ದಾರೆ. 

ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಹಲ್ಲೆ ಹಾಗೂ ದಾಳಿ ಪ್ರಕರಣಗಳು ನಡೆಯುತ್ತಿವೆ. 

ಈ ಹಿನ್ನೆಲೆಯಲ್ಲಿ ಐಎಂಎ  ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿರುವ ಅಮಿತ್ ಶಾ ಅವರು ಸಂಪೂರ್ಣ ಭದ್ರತೆ ನೀಡುವ ಭರವಸೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ. 

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ದಾಳಿ ಹಾಗೂ ಹಲ್ಲೆ ಖಂಡಿಸಿ ಐಎಂಎ ಪ್ರತಿಭಟನೆ ನಡೆಸಲು ಮುಂದಾಗಿತ್ತು. 

ತಮಿಳುನಾಡಿ ಶಿಲ್ಲೊಂಗ್ ನಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟ ಇಬ್ಬರು ವೈದ್ಯರ ಅಂತ್ಯ ಸಂಸ್ಕಾರದ ವೇಳೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ತಮ್ಮ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದರಿಂದ ವೈರಸ್ ಹರಡುತ್ತದೆ ಎಂದು ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಕೆಲ ವೈದ್ಯರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದ ಘಟನೆಗಳೂ ಕೂಡ ವರದಿಯಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com