ಕೋವಿಡ್‌ನಿಂದ ಮುಕ್ತಿ ಬಳಿಕ ವಿಶ್ವ ಆರೋಗ್ಯ ಸಂಸ್ಧೆ ಮರುರಚನೆ: ಭಾರತದ ಆಗ್ರಹಕ್ಕೆ ಆಸ್ಟ್ರೇಲಿಯಾ ಬೆಂಬಲ

ಕೋವಿಡ್ 19 ಮಹಾಮಾರಿಯಿಂದ ಮುಕ್ತಿ ಬಳಿಕ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ)ಯನ್ನು ಮರುರಚಿಸಬೇಕು ಎಂಬ ಭಾರತದ ವಾದಕ್ಕೆ ಆಸ್ಟ್ರೇಲಿಯಾ ಬೆಂಬಲ ವ್ಯಕ್ತಪಡಿಸಿದೆ.
ಪ್ರಧಾನಿ ಮೋದಿ-ಬ್ಯಾರಿ ಓ ಫೆರಲ್
ಪ್ರಧಾನಿ ಮೋದಿ-ಬ್ಯಾರಿ ಓ ಫೆರಲ್

ನವದೆಹಲಿ: ಕೋವಿಡ್ 19 ಮಹಾಮಾರಿಯಿಂದ ಮುಕ್ತಿ ಬಳಿಕ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ)ಯನ್ನು ಮರುರಚಿಸಬೇಕು ಎಂಬ ಭಾರತದ ವಾದಕ್ಕೆ ಆಸ್ಟ್ರೇಲಿಯಾ ಬೆಂಬಲ ವ್ಯಕ್ತಪಡಿಸಿದೆ. 

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡಬ್ಲ್ಯೂಎಚ್ಒ ಅನ್ನು ಮರುರಚಿಸಬೇಕು ಎಂದು ಜಿ20 ರಾಷ್ಟ್ರಗಳ ನಾಯಕರ ವರ್ಚುಯಲ್ ಸಭೆಯಲ್ಲಿ ಆಗ್ರಹಿಸಿದ್ದರು. ಇದಕ್ಕೆ ಆಸ್ಟ್ರೇಲಿಯಾ ಸರ್ಕಾರದ ಬೆಂಬಲವಿದೆ ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾದ ನಿಯೋಜಿತ ರಾಯಭಾರಿ ಬ್ಯಾರಿ ಓ ಫೆರಲ್ ಹೇಳಿದ್ದರು. 

ಜಗತ್ತನ್ನೇ ಆವರಿಸಿರುವ ಮಹಾಮಾರಿ ಕೊರೋನಾ ಪರಿಸ್ಥಿತಿಯನ್ನು ಡಬ್ಲ್ಯೂಎಚ್ಒ ನಿಭಾಯಿಸಿದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂಬುದು ಆಸ್ಟ್ರೇಲಿಯಾದ ಅಭಿಪ್ರಾಯವಾಗಿದೆ. ಆದರೆ ಸದ್ಯ ಇದು ಸಾಧ್ಯವಿಲ್ಲ. ಕೋವಿಡ್ ಬಳಿಕ ಈ ಬಗ್ಗೆ ನಿರ್ಧಾರಕೈಗೊಳ್ಳುವುದಾಗಿ ಹೇಳಿದ್ದಾರೆ. 

ಜಗತ್ತಿನಾದ್ಯಂತ ಕೊರೋನಾ ವೈರಸ್ ಸೋಂಕಿಗೆ 27,63,080 ಮಂದಿ ತುತ್ತಾಗಿದ್ದಾರೆ. ಇನ್ನು 1,93 ಲಕ್ಷ ಮಂದಿ ಅದಾಗಲೇ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com