ಒಂದು ವರ್ಷದ ಕೂಸಿಗೆ ಕೋವಿಡ್-19 ಚಿಕಿತ್ಸೆ ಕೊಟ್ಟು ಕೊರೋನಾ ಸೋಂಕಿಗೆ ಗುರಿಯಾಗಿದ್ದ ಸರ್ಜನ್ ಗುಣಮುಖ 

ಒಂದು ವರ್ಷದ ಮಗುವಿಗೆ ಕೊರೋನಾ ವೈರಸ್ ಚಿಕಿತ್ಸೆ ನೀಡಿ ಕೋವಿಡ್-19 ಸೋಂಕಿಗೆ ಗುರಿಯಾಗಿದ್ದ ಸರ್ಜನ್ ಈಗ ಗುಣಮುಖರಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಒಂದು ವರ್ಷದ ಮಗುವಿಗೆ ಕೊರೋನಾ ವೈರಸ್ ಚಿಕಿತ್ಸೆ ನೀಡಿ ಕೋವಿಡ್-19 ಸೋಂಕಿಗೆ ಗುರಿಯಾಗಿದ್ದ ಸರ್ಜನ್ ಈಗ ಗುಣಮುಖರಾಗಿದ್ದಾರೆ. 

ಕರ್ನಾಟಕದ ಪೇಷೆಂಟ್ ನಂ.302 ಇವರಾಗಿದ್ದು, ಗುರುವಾರದಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ ಕಲಬುರ್ಗಿಯ ಆಸ್ಪತ್ರೆಯಲ್ಲಿ ಕೋವಿಡ್-19 ಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿರುವವರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಪ್ರಕರಣ 50 ನ್ನು ದಾಟಿದ್ದರೆ 5 ಜನ ಮೃತಪಟ್ಟಿದ್ದಾರೆ. 

ಕಲಬುರ್ಗಿಯಲ್ಲಿ ಈ ಪ್ರಕರಣವೂ ಸೇರಿ ಇಬ್ಬರು ವೈದ್ಯರಿಗೆ ಕೊರೋನಾ ಸೋಂಕು ಹರಡಿತ್ತು, ಇಬ್ಬರೂ ವೈದ್ಯರು ಈಗ ಗುಣಮುಖರಾಗಿದ್ದಾರೆ.   ಈ ವೈದ್ಯರು ಚಿಕಿತ್ಸೆ ನೀಡಿದ್ದ ಒಂದು ವರ್ಷದ ಮಗು ಕೋವಿಡ್-19 ರಿಂದ ಇನ್ನಷ್ಟೇ ಚೇತರಿಕೆ ಕಾಣಬೇಕಿದೆ. ಇನ್ನೋರ್ವ ನರ್ಸ್ ಸಹ ಗುಣಮುಖರಾಗಬೇಕಿದ್ದು, ಕಲಬುರಗಿಯ ಡೆಪ್ಯುಟಿ ಕಮಿಷನರ್ ನೀಡಿರುವ ಮಾಹಿತಿಯ ಪ್ರಕಾರ ಒಟ್ಟಾರೆ 3,927 ಜನರ ಗಂಟಲು ದ್ರವವನ್ನು ಪರೀಕ್ಷಿಸಲಾಗಿದೆ. ಈ ಪೈಕಿ 3403 ಜನರ ಮಾದರಿಗಳು ಕೋವಿಡ್-19 ಕ್ಕೆ ನೆಗೆಟೀವ್ ಬಂದಿದ್ದರೆ 472 ಸ್ಯಾಂಪಲ್ ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com