ಕೋವಿಡ್ ಲಸಿಕೆ: ಎರಡನೇ ಹಂತದ ಮಾನವ ಪ್ರಯೋಗ ಹಂತ ಇಂದಿನಿಂದ ಆರಂಭ

 ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಕೋವಿಡ್ -19 ಲಸಿಕೆ ಮೇಲಿನ ಎರಡನೇ ಹಂತದ ಮಾನವ ಪ್ರಯೋಗವನ್ನು ಪುಣೆ ಮೂಲದ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಇಂದಿನಿಂದ ಆರಂಭಿಸಲಿದೆ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ
Updated on: 

ನವದೆಹಲಿ: ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಕೋವಿಡ್ -19 ಲಸಿಕೆ ಮೇಲಿನ ಎರಡನೇ ಹಂತದ ಮಾನವ ಪ್ರಯೋಗವನ್ನು ಪುಣೆ ಮೂಲದ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಇಂದಿನಿಂದ ಆರಂಭಿಸಲಿದೆ.

ಪುಣೆಯಲ್ಲಿನ ಭಾರತಿ ವಿದ್ಯಾರ್ಥಿಪೀಠ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆರೋಗ್ಯವಂತ ಯುವಕರ ಮೇಲೆ ಕೊವಿಸೀಲ್ಡ್ ಪ್ರಯೋಗಿಸಲಿದ್ದು, ತಜ್ಞರು ಯಾದೃಚ್ಚಿಕ ಅಧ್ಯಯನದ ಮೂಲಕ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿಯನ್ನು ನಿರ್ಧರಿಸಲಿದ್ದಾರೆ.

ಕೋವಿಡ್-19 ಲಸಿಕೆ ಉತ್ಪಾದಿಸುತ್ತಿರುವ ಬ್ರಿಟಿಷ್- ಸ್ವಿಡೀಸ್ ಔಷಧ ಕಂಪನಿ ಅಸ್ಟಾಜಿನೆಕಾದೊಂದಿಗೆ  ಸೆರೆಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಹಭಾಗಿತ್ವ ಹೊಂದಿದೆ.

ಕೇಂದ್ರಿಯ ಓಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ)ದಿಂದ ಅನುಮತಿ ಪಡೆದಿದ್ದು, ಇಂದಿನಿಂದ ಭಾರತಿ ವಿದ್ಯಾಪೀಠ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಎರಡನೇ ಹಂತದ  ಮಾನವ ಪ್ರಯೋಗವನ್ನು ಆರಂಭಿಸಲಾಗುವುದು, ನಮ್ಮ ದೇಶದ ಜನರಿಗೆ ವಿಶ್ವ ದರ್ಜೆಯ ಮಟ್ಟದ ಕೋವಿಡ್ ಲಸಿಕೆ ದೊರೆಯುವಂತೆ ಮಾಡಲಾಗುವುದು ಎಂದು ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಹೆಚ್ಚುವರಿ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

 ಮೈಸೂರಿನ ಜೆಎಸ್ ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿ, ದೆಹಲಿಯ ಏಮ್ಸ್ ಸೇರಿದಂತೆ 17 ಕಡೆಗಳಲ್ಲಿ ಮಾನವ ಪ್ರಯೋಗ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 18ವರ್ಷಕ್ಕಿಂತ ಮೇಲ್ಪಟ್ಟ 1600 ಜನರು ಈ ಪ್ರಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com