ನೇರವಾಗಿ ವಿಮಾನ ಸಂಸ್ಥೆಗಳಲ್ಲೇ ಟಿಕೆಟ್ ಬುಕ್ ಮಾಡಿ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಸೂಚನೆ

ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು ನೇರವಾಗಿ ವಿಮಾನ ಸಂಸ್ಥೆಗಳಲ್ಲೇ ಟಿಕೆಟ್ ಬುಕ್ ಮಾಡಬೇಕು.
ಸಾಂದರ್ಭಕ ಚಿತ್ರ
ಸಾಂದರ್ಭಕ ಚಿತ್ರ
Updated on

ನವದೆಹಲಿ: ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು ನೇರವಾಗಿ ವಿಮಾನ ಸಂಸ್ಥೆಗಳಲ್ಲೇ ಟಿಕೆಟ್ ಬುಕ್ ಮಾಡಬೇಕು. ನಮಗೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಬುಧವಾರ ಅಧಿಕೃತವಾಗಿ ತಿಳಿಸಿದೆ.

ಆಗಸ್ಟ್ 22 ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಟೋಕಾಲ್ ನಲ್ಲಿ, ಹೊರಹೋಗುವ ವಿಮಾನಗಳಲ್ಲಿ ಪ್ರಯಾಣಿಸಲು ಅರ್ಹರಾದ ವ್ಯಕ್ತಿಗಳು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಅಥವಾ ಗೊತ್ತುಪಡಿಸಿದ ಏಜೆನ್ಸಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಲಾಗಿತ್ತು.

ಈ ಸಂಬಂಧ ಇಂದು ಟ್ವೀಟ್ ಮಾಡಿರುವ ವಿಮಾನಯಾನ ಸಚಿವಾಲಯ, ವಂದೇ ಭಾರತ್ ಮಿಷನ್ ಮತ್ತು ವಿಮಾನಯಾನ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನ ಸಂಸ್ಥೆಗಳನ್ನು ಈ ಉದ್ದೇಶಕ್ಕಾಗಿ ಗೊತ್ತುಪಡಿಸಿದ್ದು, ಪ್ರಯಾಣಿಕರು ಆ ಸಂಸ್ಥೆಗಳಲ್ಲಿ ಟಿಕೆಟ್ ಬುಕ್ ಮಾಡಬೇಕು. ನಮಗೆ ಅರ್ಜಿಯ ಸಲ್ಲಿಸುವ ಅಗತ್ಯ ಇಲ್ಲ ಎಂದು ಸ್ಪಷ್ಟ ಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com