ನನ್ನ ಕುಟುಂಬದ ವಿರುದ್ಧದ ದಾಳಿ ನಿಲ್ಲಿಸಿ, ಸುಶಾಂತ್ ರನ್ನು ಮಾದಕ ವಸ್ತು ಸೇವನೆಯಿಂದ ದೂರವಿಡಲು ಪ್ರಯತ್ನಿಸಿದ್ದೆ: ರಿಯಾ ಚಕ್ರವರ್ತಿ

ನನ್ನ ಕುಟುಂಬದ ವಿರುದ್ಧದ ವಾಗ್ದಾಳಿ ನಿಲ್ಲಿಸಿ.. ನಾನು ಸುಶಾಂತ್ ರನ್ನು ಮಾದಕ ವಸ್ತು ಸೇವನೆಯಿಂದ ದೂರವಿಡಲು ಪ್ರಯತ್ನಿಸಿದ್ದೆ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ.
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ
Updated on: 

ಮುಂಬೈ: ನನ್ನ ಕುಟುಂಬದ ವಿರುದ್ಧದ ವಾಗ್ದಾಳಿ ನಿಲ್ಲಿಸಿ.. ನಾನು ಸುಶಾಂತ್ ರನ್ನು ಮಾದಕ ವಸ್ತು ಸೇವನೆಯಿಂದ ದೂರವಿಡಲು ಪ್ರಯತ್ನಿಸಿದ್ದೆ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ.

ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಕುರಿತು ಮಾತನಾಡಿರುವ ರಿಯಾ ಚಕ್ರವರ್ತಿ,  ಸುಶಾಂತ್ ಸಾವಿನ ವಿಚಾರಕ್ಕೆ ಸಂಬಂಧಿಸದಂತೆ ನನ್ನ ಕುಟುಂಬದ ವಿರುದ್ಧದ ದಾಳಿ ನಿಲ್ಲಿಸಿ. ಸುಶಾಂತ್ ಸಿಂಗ್ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಆಲವತ್ತು ಮಾಡಿಕೊಂಡಿದ್ದಾರೆ. 

ಸುಶಾಂತ್ ನನ್ನ ಕನಸಿನಲ್ಲಿ ಬಂದಿದ್ದರಿಂದ ಇಂದು ಮಾಧ್ಯಮದ ಮುಂದೆ ಬಂದಿದ್ದೇನೆ. ಕನಸಿನಲ್ಲಿ ಬಂದ ಸುಶಾಂತ್, ಸತ್ಯ ಏನು ಎಂಬುವುದನ್ನು ತಿಳಿಸು, ಧೈರ್ಯವಾಗಿರು ಎಂದು ಹೇಳಿದ್ದರಿಂದ ಸಂದರ್ಶನ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ
ಜೂನ್ 14ರಂದು ಶವಾಗಾರದಲ್ಲಿ ನಾನು ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದೆ. ಅಂದು ನಾನು ಸೋದರನ ಜೊತೆ ಮನೆಯಲ್ಲಿದ್ದೆ. ಆ ವೇಳೆ ನನ್ನ ಫ್ರೆಂಡ್ ಕರೆ ಮಾಡಿ, ಕೆಲ ಸುದ್ದಿಗಳು ಹರಿದಾಡುತ್ತಿದ್ದು, ಅದನ್ನು ನಿಲ್ಲಿಸುವಂತೆ ಹೇಳಿದರು. ಆದರೆ ನನ್ನ ಫ್ರೆಂಡ್ ಗೆ ನಾನು ನನ್ನ ಸುಶಾಂತ್  ಮನೆಯಿಂದ ಹೊರ ಬಂದಿರುವ ವಿಚಾರ ತಿಳಿದಿರಲಿಲ್ಲ. ಸುಶಾಂತ್ ಅಂತಿಮ ದರ್ಶನ ಪಡೆಯಲು ಅವರ ಮನೆಗೆ ಹೋಗಿರಲಿಲ್ಲ. ಸಾವಿನ ವಿಷಯ ತಿಳಿದಾಗ ಶಾಕ್ ಆಗಿತ್ತು. ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ತಿಳಿಯದಾಗಿತ್ತು. ಸುಶಾಂತ್ ಸಾವು ನನ್ನನ್ನು ಸಂಪೂರ್ಣವಾಗಿ ಸೋಲಿಸಿತ್ತು. ಸುಶಾಂತ್  ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವವರ ಲಿಸ್ಟ್ ನಲ್ಲಿ ನನ್ನ ಹೆಸರು ಇರಲಿಲ್ಲ. ಆ ಲಿಸ್ಟ್ ನಲ್ಲಿ ಇಂಡಸ್ಟ್ರಿಯವರ ಹೆಸರುಗಳಿದ್ದವು. ಉದ್ದೇಶಪೂರ್ವಕವಾಗಿ ನನ್ನ ಹೆಸರು ಕೈ ಬಿಟ್ಟಿದ್ದರಿಂದ ಅಂತ್ಯಕ್ರಿಯೆಗೆ ತೆರಳಲಿಲ್ಲ ಎಂದರು. 

ನನಗೆ ಶವಾಗಾರದ ಹೊರಗೆ ನಿಲ್ಲುವಂತೆ ಹೇಳಲಾಗಿತ್ತು. ನನ್ನ ಗೆಳೆಯ ಅಲ್ಲಿದ್ದ ಒಬ್ಬರಿಗೆ ಮೃತದೇಹ ನೋಡಲು ಅನುಮತಿ ನೀಡುವಂತೆ ಕೇಳಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಈ ವೇಳೆ ನೀವು ಮೃತದೇಹ ನೋಡಬಹುದು ಎಂದು ಹೇಳಿದ್ದರು. ಕೇವಲ 3  ರಿಂದ 4 ಸೆಕೆಂಡ್ ಸುಶಾಂತ್ ಮೃತದೇಹ ನೋಡಿದ್ದೇನೆ. ಆಗ ಸಾರಿ ಕೇಳಿ, ಸುಶಾಂತ್ ಕಾಲಿಗೆ ನಮಸ್ಕರಿಸಿದ್ದೇನೆ. ಸುಶಾಂತ್ ತನ್ನ ಪ್ರಾಣ ಕಳೆದುಕೊಂಡಿದ್ದ, ದುಃಖದಲ್ಲಿದ್ದ ನಾನು ಐ ಆ್ಯಮ್ ಸಾರಿ ಎಂದು ಹೇಳಿ ಕಣ್ಣೀರಿಟ್ಟಿದ್ದೆ. ಆದರೆ ಇಂದು ಆ ಪದವನ್ನ ತಮಾಷೆ ಮಾಡಲಾಗುತ್ತಿದೆ. ನನ್ನ ಮಾತುಗಳಿಗೆ ಬೇರೆ  ಬೇರೆ ಅರ್ಥ ಕಲ್ಪಿಸಿದವರ ಮನೋಸ್ಥಿತಿಯ ಬಗ್ಗೆ ಬೇಸರವಿದೆ ಎಂದು ಹೇಳಿದ್ದಾರೆ.

ಸುಶಾಂತ್‌ ಮಾದಕವಸ್ತು ಸೇವಿಸುತ್ತಿದ್ದರು
ಸುಶಾಂತ್‌ ಸಿಂಗ್‌ ರಜಪೂತ್‌ ಮಾದಕವಸ್ತು ಸೇವನೆ ಮಾಡುತ್ತಿದ್ದರು. ಸುಶಾಂತ್‌ ಮರಿಜುವಾನಾ (ಮಾದಕ ವಸ್ತು) ಸೇವಿಸುತ್ತಿದ್ದರು. ಡ್ರಗ್ಸ್‌ ಸೇವನೆ ಮಾಡುವುದನ್ನು ನಿಲ್ಲಿಸು ಎಂದು ಹಲವು ಸಲ ಹೇಳಿದ್ದೆ ಹಾಗೂ ಅವರಿಂದ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೆ ಅಷ್ಟೇ.. ಆದರೆ ನಾನೇ ಮಾದಕವಸ್ತು ಸೇವಿಸುತ್ತಿದ್ದೆ.  ಇದಕ್ಕಾಗಿ ಸುಶಾಂತ್ ರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೆ ಎಂದು ಬಿಂಬಿಸಲಾಗುತ್ತಿದೆ. ನಾನು ನನ್ನ ಜೀವಮಾನದಲ್ಲೇ ಡ್ರಗ್ಸ್‌ ಸೇವನೆ ಮಾಡಿಲ್ಲ, ಬೇಕಾದರೆ ನನ್ನ ರಕ್ತ ಪರೀಕ್ಷೆ ಮಾಡಲಿ ಎಂದು ರಿಯಾ ಸವಾಲೆಸೆದಿದ್ದಾರೆ. 

ಇನ್ನು ರಿಯಾ ಚಕ್ರವರ್ತಿ ಅವರಿಗೆ ಮಾದಕವಸ್ತು ಸಾಗಣೆದಾರರ ಸಂಪರ್ಕ ಇರುವುದು ತನಿಖೆಯ ವೇಳೆ ದೃಢಪಟ್ಟಿದೆ. ಆದಾಗ್ಯೂ  ವಕೀಲರು ರಿಯಾ ಮಾದಕವಸ್ತು ಸೇವನೆ ಮಾಡುತ್ತಿರಲಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಮಾದಕವಸ್ತು ಕುರಿತಂತೆ ಸುಶಾಂತ್‌ ಮತ್ತು ರಿಯಾ ನಡುವಿನ ಚಾಟಿಂಗ್‌  ಮಾಹಿತಿಯೂ ಸಿಬಿಐಗೆ ಲಭ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com