ಉಗ್ರ ಸಂಘಟನೆ, ಭಯೋತ್ಪಾದಕರ ವಿರುದ್ಧ ಪಾಕ್ ವಿಶ್ವಾಸಾರ್ಹ ಕ್ರಮಕ್ಕೆ ಭಾರತದ ಆಗ್ರಹ!

ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಸೇರಿದಂತೆ ಭಯೋತ್ಪಾದಕ ಗುಂಪು ಮತ್ತು ಅವುಗಳ ನಾಯಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತ ಪಾಕಿಸ್ತಾನವನ್ನು ಆಗ್ರಹಪಡಿಸಿದೆ. 
ಅನುರಾಗ್ ಶ್ರೀವಾಸ್ತವ
ಅನುರಾಗ್ ಶ್ರೀವಾಸ್ತವ

ನವದೆಹಲಿ: ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಸೇರಿದಂತೆ ಭಯೋತ್ಪಾದಕ ಗುಂಪು ಮತ್ತು ಅವುಗಳ ನಾಯಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತ ಪಾಕಿಸ್ತಾನವನ್ನು ಆಗ್ರಹಪಡಿಸಿದೆ. 

ಕರಾಚಿಯಲ್ಲಿ ದಾವೂದ್ ಇಬ್ರಾಹಿಂ ವಾಸ್ತವ್ಯ ಒಪ್ಪಿಕೊಂಡು ನಂತರ, ಪಾಕಿಸ್ತಾನ ಹಿಂದೆ ಸರಿದಿದೆ. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಕಪ್ಪುಪಟ್ಟಿಯಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶಾಸನಬದ್ಧ ನಿಯಂತ್ರಣ ಆದೇಶದಂತೆ ಪ್ರಕಟಿಸಿದ ಪಟ್ಟಿಯಲ್ಲಿ ದಾವೂದ್ 88ನೇಯವನಾಗಿದ್ದಾನೆ.  

ಪಾಕ್ ತನ್ನ ಭೂಪ್ರದೇಶದಲ್ಲಿ ಪಟ್ಟಿ ಮಾಡಿದ ವ್ಯಕ್ತಿಗಳ ಉಪಸ್ಥಿತಿಯನ್ನು ಒಪ್ಪಿಕೊಳ್ಳುತ್ತದೆ ಹಾಗೂ ಈ ಪಟ್ಟಿಮಾಡಿದ ವ್ಯಕ್ತಿಗಳ ಮೇಲೆ ಯಾವ  ಹೊಸ, ದಿಟ್ಟ ಕ್ರಮ ಜರುಗಿಸಲಿಸದೆ ಎಂದು ವಿಶ್ವಸಮುದಾಯ ನಿರೀಕ್ಷೆ ಮಾಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ಇಲ್ಲಿ ವಾಸ್ತವ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪುಲ್ವಾಮಾ ಭಯೋತ್ಪಾದಕ ದಾಳಿ ಸಂಬಂಧ ಎನ್ಐಎ ಒಂದೂವರೆ ವರ್ಷದ ಬಳಿಕ 5000 ಪುಟಗಳ ಚಾರ್ಚ್ ಶೀಟ್ ಸಲ್ಲಿಸಿದ್ದು ಅದರಲ್ಲಿ ದಾಳಿಯ ಮಾಸ್ಟರ್ ಮೈಂಡ್ ಗಳಾದ ಜೈಶ್ ಇ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಮತ್ತು ಆತನ ಸಹೋದರ ಅಬ್ದುಲ್ ಅಸ್ಗರ್ ಸೇರಿದಂತೆ ಉಗ್ರ ಮೊಹಮ್ಮದ್ ಉಮರ್ ಫಾರೂಕ್, ಆತ್ಮಾಹುತಿ ಬಾಂಬರ್ ಅದಿಲ್ ಅಹ್ಮದ್ ದಾರ್ ಮತ್ತು ಇತರರ ಹೆಸರನ್ನು ನಮೂದಿಸಿತ್ತು. 

ಪುಲ್ವಾಮಾ ದಾಳಿ ಕುರಿತಂತೆ ಪಾಕಿಸ್ತಾನಕ್ಕೆ ಸಾಕ್ಷಿಗಳನ್ನು ಒದಗಿಸುತ್ತಿದ್ದರೂ ಭಯೋತ್ಪಾದಕರು ಮತ್ತು ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮಕೈಗೊಳ್ಳದೆ ಅವರನ್ನು ಪೋಷಿಸುತ್ತಿದೆ ಎಂದು ಅನುರಾಗ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com