ಕೇಂದ್ರದಿಂದ ಅನ್ ಲಾಕ್ 4.0: ಸೆ. 7ರಿಂದ ದೇಶಾದ್ಯಂತ ಮೆಟ್ರೋ ರೈಲು ಓಪನ್, ಏನಿರುತ್ತೆ? ಏನಿರಲ್ಲ?

ಕೊರೋನಾ ಮಹಾಮಾರಿ ನಡುವೆಯೂ ಹಂತ ಹಂತವಾಗಿ ಸಹಜಸ್ಥಿತಿಗೆ ತರಲು ಕೇಂದ್ರ ಸರ್ಕಾರ ಅನ್ ಲಾಕ್ ಪ್ರಕ್ರಿಯೆಯನ್ನು ನಡೆಸಿಕೊಂಡು ಬರುತ್ತಿದೆ. ಅದೇ ರೀತಿ ಇದೀಗ ಸೆ.7ರಿಂದ ಮೆಟ್ರೋ ರೈಲು ಸೇವೆಗೆ ಅನುಮತಿ ನೀಡಿದೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ನವದೆಹಲಿ: ಸೆಪ್ಟೆಂಬರ್ 21ರಿಂದ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕತಿಕ, ಧಾರ್ಮಿಕ, ರಾಜಕೀಯ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗರಿಷ್ಠ 100 ಮಂದಿ ಪಾಲ್ಗೊಳ್ಳಲು ಅನುಮತಿ ಕೊಡಲಾಗಿದೆ.

ಸೆಪ್ಟೆಂಬರ್ 21ರಿಂದಲೇ ಬಯಲು ರಂಗಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಕಂಟೈನ್ಮೆಂ ಟ್ ವಲಯದ ಹೊರ ಭಾಗದಲ್ಲಿ ಸಿನಿಮಾ ಮಂದಿರಗಳು, ಈಜುಕೊಳಗಳು, ಮನರಂಜನಾ ಪಾರ್ಕ್ಗ ಳಿಗೆ ನಿರ್ಬಂಧ ಮುಂದುವರೆಯಲಿದೆ.

ಕೇಂದ್ರ ಗೃಹ ಸಚಿವಾಲಯದ ಅನುಮತಿ ಹೊರತುಪಡಿಸಿದಂತೆ ಉಳಿದವರಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಮುಂದುವರೆಯಲಿದ್ದು, ಅಂತಾರಾಜ್ಯಕ್ಕೆ ಪ್ರಯಾಣಕ್ಕೆ ಇದ್ದ ಎಲ್ಲಾ ಅಡೆತಡೆಗಳನ್ನು ತೆಗೆದು ಹಾಕಲಾಗಿದೆ.

ಸೆಪ್ಟೆಂಬರ್ 30ರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಗಳು, ಕಾಲೇಜು, ಶಿಕ್ಷಣ ಸಂಸ್ಥೆಗಳು, ತರಬೇತಿ ಸಂಸ್ಥೆಗಳು ತೆರೆಯಲು ಅವಕಾಶ ನೀಡಲಾಗಿದೆ. ಆನ್ ಲೈನ್ ಮತ್ತು ದೂರ ಶಿಕ್ಷಣ ಕಲಿಕಾ ವ್ಯವಸ್ಥೆಯನ್ನು ಮುಂದುವರೆಸಲು ಪ್ರೋತ್ಸಾಹ ನೀಡಲಾಗುತ್ತಿದ್ದು, ಕಂಟೈನ್ ಮೆಂಟ್ ವಲಯವಲ್ಲದ ಪ್ರದೇಶಗಳಲ್ಲಿ ಇವುಗಳನ್ನು ಆರಂಭಿಸಬಹುದು.

ಶಿಕ್ಷಕರು ಮತ್ತು ಶಿಕ್ಷಕೇತರ ಹಾಜರಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸಲಾಗಿದೆ. ಪಾಲಕರು ಮತ್ತು ಪೋಷಕರ ಲಿಖಿತ ಅನುಮತಿ ಮೇರೆಗೆ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಬಹುದಾಗಿದೆ. ಕೌಶಲ್ಯ ಮತ್ತು ಉದ್ಯಮ ತರಬೇತಿಗೆ ಅನುಮತಿ ನೀಡಲಾಗಿದ್ದು, ಸಂಶೋಧನೆ ನಡೆಸುವ ಹಾಗೂ ವೃತ್ತಿ ಶಿಕ್ಷಣ ಪಡೆಯುತ್ತಿರುವ  ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಯೋಗಾಲಯಗಳಲ್ಲಿ ಕಲಿಕೆ ಮುಂದುವರೆಸಲು ಸಂಬಂಧಪಟ್ಟ ರಾಜ್ಯಗಳ ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com